ಸಾಮಾಜಿಕ ಜಾಲತಾಣದ ಮೂಲಕ ಸೃಜನಾತ್ಮಕ ರೀತಿಯಲ್ಲಿ ಜಾಗೃತಿಯನ್ನು ಹರಡಲು ವಿವಿಧ ರಾಜ್ಯಗಳ ಪೊಲೀಸರು ಗಮನ ಸೆಳೆಯುತ್ತಾರೆ. ಇದೀಗ ಪಂಜಾಬ್ ಪೊಲೀಸರು ಹೊಸ ಟ್ರೆಂಡ್ಗಳಿಗೆ ಹೆಸರುವಾಸಿಯಾಗಿದ್ದಾರೆ.
ಸುಶಾಂತ್ ದತ್ ಎಂಬಾತ ತನ್ನ ನೆರೆಯವನ ಹೆಂಡತಿಗೆ ‘ಐ ಲೈಕ್ ಯೂ’ ಸಂದೇಶವನ್ನು ಕಳುಹಿಸಿ ನಂತರ ಸಿಕ್ಕಿಬಿದ್ದಿದ್ದು, ಬಳಿಕ ಈ ವಿಷಯ ಗಂಭೀರವಾಗಿದೆ. ಅವನಿಗೆ ಪಾಠ ಕಲಿಸಲು ನೆರೆಹೊರೆಯವರು ಮನೆ ಬಾಗಿಲು ತಟ್ಟಿದ್ದಾರೆ.
ಮತ್ತೆ ಪೆಟ್ಟು ತಿನ್ನುವ ಆತಂಕದಲ್ಲಿದ್ದ ಆತ ಟ್ವೀಟ್ ಮಾಡಿ ಪೊಲೀಸರ ನೆರವು ಕೋರಿದ್ದ.
ಸರ್ ನಾನು ಒಬ್ಬರಿಗೆ “ಐ ಲೈಕ್ ಯು” ಸಂದೇಶವನ್ನು ಕಳುಹಿಸಿದೆ, ಅವಳ ಪತಿ ನಿನ್ನೆ ರಾತ್ರಿ ಬಂದು ನನ್ನನ್ನು ಕೆಟ್ಟದಾಗಿ ಹೊಡೆದರು, ನಾನು ಮತ್ತೆ ಮತ್ತೆ ಕ್ಷಮೆ ಯಾಚಿಸುತ್ತೇನೆ. ಆದರೆ ಈಗ ನಾನು ನನ್ನ ಸುರಕ್ಷತೆಯ ಬಗ್ಗೆ ಚಿಂತಿಸುತ್ತಿದ್ದೇನೆ, ದಯವಿಟ್ಟು ಅಗತ್ಯ ಕ್ರಮಕೈಗೊಳ್ಳಿ, ಸಹಾಯ ಮಾಡಿ, ರಕ್ಷಣೆ ಕೊಡಿ, ಅವರು ಮತ್ತೆ ದಾಳಿ ಮಾಡಬಹುದು ಎಂದು ಕೋರಿದ್ದ.
ಈ ಸಹಾಯ ಕೋರಿಕೆಯು ಪಂಜಾಬ್ ಪೊಲೀಸರ ಗಮನವನ್ನು ಸೆಳೆದ ತಕ್ಷಣ, ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಿದರು. ಹಾಗೆಯೇ, ಅವರ ಎಪಿಕ್ ರಿಪ್ಲೆ ನೀಡಿದ್ದು ದತ್ ಕಾಲೆಳೆದಿದ್ದಾರೆ, ಹತ್ತಿರದ ಪೊಲೀಸ್ ಠಾಣೆಯಲ್ಲಿ ವರದಿ ಸಲ್ಲಿಸಿದರೆ ನೆರೆಹೊರೆಯವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿ ಅದರೊಟ್ಟಿಗೆ ಬಿಸಿಮುಟ್ಟಿಸಿದ್ದಾರೆ.
ಟ್ವೀಟ್ನಲ್ಲಿ, ಮಹಿಳೆಗೆ ತಾವು ಕಳಿಸಿದ ಅನಗತ್ಯ ಸಂದೇಶದಲ್ಲಿ ನೀವು ಏನನ್ನು ನಿರೀಕ್ಷಿಸುತ್ತೀದ್ದಿರಿ ಎಂದು ಖಚಿತವಾಗಿಲ್ಲ, ಆದರೆ ಅವರು ನಿಮ್ಮನ್ನು ಹೊಡೆಯಬಾರದಿತ್ತು. ಈ ಎರಡೂ ಅಪರಾಧಗಳನ್ನು ಕಾನೂನಿನ ಪ್ರಕಾರ ಸರಿಯಾಗಿ ನೋಡಿಕೊಳ್ಳಲಾಗುವುದು ! ನೀವು ಹತ್ತಿರದ ಠಾಣೆಗೆ ಭೇಟಿ ನೀಡಿ ದೂರು ಸಲ್ಲಿಸಬಹುದು ಎಂದು ಪೊಲೀಸರು ಸೂಚಿಸಿದ್ದಾರೆ.