alex Certify BIG NEWS: ಕಳೆದ ವರ್ಷ ಭಾರತೀಯ ಪೌರತ್ವ ತ್ಯಜಿಸಿದ 1.63 ಲಕ್ಷ ಮಂದಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಕಳೆದ ವರ್ಷ ಭಾರತೀಯ ಪೌರತ್ವ ತ್ಯಜಿಸಿದ 1.63 ಲಕ್ಷ ಮಂದಿ….!

ಕೇಂದ್ರ ಸರ್ಕಾರ ಸಂಸತ್‌ನಲ್ಲಿ ಆಘಾತಕಾರಿ ಸಂಗತಿಯೊಂದನ್ನು ಬಹಿರಂಗಪಡಿಸಿದೆ. ಕಳೆದ ವರ್ಷ 1,63,000ಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿರುವುದಾಗಿ ಮಾಹಿತಿ ನೀಡಿದೆ. ಈ ಸಂಖ್ಯೆ 2015 ರಿಂದೀಚೆಗೆ ಅತ್ಯಧಿಕವಾಗಿದ್ದು, ನಿಜಕ್ಕೂ ಕಳವಳಕಾರಿ ಎನಿಸಿದೆ.

ಭಾರತೀಯ ಪೌರತ್ವ ತ್ಯಜಿಸಿದವರ ಪೈಕಿ ಅರ್ಧದಷ್ಟು ಮಂದಿ ಅಮೆರಿಕದ ಪ್ರಜೆಗಳಾಗಲು ಇಚ್ಛೆಪಟ್ಟಿದ್ದಾರೆ. 2021 ರಲ್ಲಿ, 1,63,370 ಭಾರತೀಯರು ತಮ್ಮ ಭಾರತೀಯ ಪಾಸ್‌ಪೋರ್ಟ್‌ಗಳನ್ನು ತ್ಯಜಿಸಿದರು. ಈ ಸಂಖ್ಯೆ 2019 ಮತ್ತು 2020 ರಲ್ಲಿ ಕ್ರಮವಾಗಿ 1,44,017 ಮತ್ತು 85,256 ಆಗಿತ್ತು.

2015 ರಿಂದೀಚೆಗಿನ ಅಂಕಿ ಅಂಶ ಮಾತ್ರ ಲಭ್ಯವಿದ್ದು, ಗೃಹ ಸಚಿವಾಲಯದ ಮಾಹಿತಿ ಪ್ರಕಾರ 2016ರಲ್ಲಿ 1,44,942 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದರು. ವೈಯಕ್ತಿಕ ಕಾರಣಕ್ಕೆ ಇವರೆಲ್ಲ ಪೌರತ್ವವನ್ನು ತ್ಯಜಿಸಿ, ತಮ್ಮ ಪಾಸ್ಪೋರ್ಟ್‌ಗಳನ್ನು ಸರೆಂಡರ್‌ ಮಾಡಿದ್ದಾರೆ. ಭಾರತೀಯ ಸಂವಿಧಾನ ಮತ್ತು ಪೌರತ್ವ ಕಾನೂನುಗಳು ಉಭಯ ಪೌರತ್ವವನ್ನು ಅನುಮತಿಸುವುದಿಲ್ಲ. ಬಿಎಸ್ಪಿ ಸಂಸದ ಹಾಜಿ ಫಜ್ಲುರ್ ರೆಹಮಾನ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ನಿತ್ಯಾನಂದ ರೈ ಈ ಅಂಕಿ ಅಂಶಗಳನ್ನು ಬಹಿರಂಗಪಡಿಸಿದ್ದಾರೆ.

ಪಾಸ್ಪೋರ್ಟ್‌ ಹಿಂದಿರುಗಿಸಿರುವ ಭಾರತೀಯರ ಪೈಕಿ 78,284 ಮಂದಿ ಅಮೆರಿಕದ ಪೌರತ್ವ ಆಯ್ಕೆ ಮಾಡಿಕೊಂಡಿದ್ದಾರೆ. 23,533 ಆಸ್ಟ್ರೇಲಿಯಾ ಪೌರತ್ವ ಪಡೆದ್ರೆ, 21,597 ಜನರು ಕೆನಡಾದ ಪೌರತ್ವ ಪಡೆಯಲು ಆದ್ಯತೆ ನೀಡಿದ್ದಾರೆ. 14,637 ಮಂದಿ ಬ್ರಿಟನ್‌, 5,986 ಮಂದಿ ಇಟಲಿ, 2,643 ಭಾರತೀಯರು ನ್ಯೂಜಿಲೆಂಡ್ ಮತ್ತು 2,516 ಮಂದಿ ಸಿಂಗಾಪುರದ ಪೌರತ್ವ ಪಡೆದಿದ್ದಾರೆ. ಕಳೆದ ವರ್ಷ 78,284 ಭಾರತೀಯರು ಅಮೆರಿಕದ ಪೌರತ್ವವನ್ನು ಪಡೆದಿದ್ದರೆ, 2020ರಲ್ಲಿ 30,828 ಮತ್ತು 2019 ರಲ್ಲಿ 61,683 ಜನರು ಅಮೆರಿಕದ ಪೌರತ್ವ ಗಿಟ್ಟಿಸಿಕೊಂಡಿದ್ದರು.

ಪಾಕಿಸ್ತಾನದಲ್ಲಿ ನೆಲೆಸಿರುವ ನಲವತ್ತೊಂದು ಭಾರತೀಯ ಪ್ರಜೆಗಳು ಕಳೆದ ವರ್ಷ ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ. 2020 ರಲ್ಲಿ ಕೇವಲ ಏಳು ಮಂದಿ ಭಾರತೀಯ ಪೌರತ್ವ ತ್ಯಜಿಸಿದ್ದರು. ಕಳೆದ ವರ್ಷ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಸುಮಾರು 326 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಅಲ್ಬೇನಿಯಾ, ಫ್ರಾನ್ಸ್, ಮಾಲ್ಟಾ, ಪಾಕಿಸ್ತಾನ, ಫಿಲಿಪೈನ್ಸ್, ಪೋರ್ಚುಗಲ್, ಆಂಟಿಗುವಾ ಮತ್ತು ಬಾರ್ಬುಡಾ, ಬಹ್ರೇನ್, ಬೆಲ್ಜಿಯಂ, ಸೈಪ್ರಸ್, ಐರ್ಲೆಂಡ್, ಕೆನಡಾ ಮುಂತಾದ ದೇಶಗಳಲ್ಲಿ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಜೋರ್ಡಾನ್, ಮಾರಿಷಸ್, ನಾರ್ವೆ, ಸಿಂಗಾಪುರ, ಸ್ಪೇನ್, ಶ್ರೀಲಂಕಾ ಮತ್ತು ವನವಾಟು ಸೇರಿದಂತೆ ಇತರ ದೇಶಗಳಲ್ಲಿ ಒಟ್ಟಾರೆಯಾಗಿ, 2015-2021 ರ ನಡುವೆ 9,32,276 ಭಾರತೀಯರು ಇತರ ದೇಶಗಳ ಪೌರತ್ವ ಪಡೆಯಲು ಭಾರತದ ಪೌರತ್ವವನ್ನು ತ್ಯಜಿಸಿದ್ದಾರೆ. 2016 ಮತ್ತು 2020ರ ನಡುವೆ 10,645 ವಿದೇಶಿ ಪ್ರಜೆಗಳು ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ಪಾಕಿಸ್ತಾನದಿಂದ 7,782 ಮತ್ತು ಅಫ್ಘಾನಿಸ್ತಾನದಿಂದ 795 ಜನರು ಭಾರತೀಯ ಪೌರತ್ವ ಕೋರಿದ್ದರು. ಈ ಪೈಕಿ 4,177 ಮಂದಿಗೆ ಭಾರತೀಯ ಪೌರತ್ವ ನೀಡಲಾಗಿದೆ. ಗೃಹ ಸಚಿವಾಲಯದ ಮಾಹಿತಿ ಪ್ರಕಾರ ಕಳೆದ ವರ್ಷ 13,383,718  ಭಾರತೀಯ ಪ್ರಜೆಗಳು ಪ್ರಸ್ತುತ ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...