ಭಾನುವಾರದಂದು ದೇಶದಾದ್ಯಂತ ನಡೆದ ನೀಟ್ ಪರೀಕ್ಷೆ ವೇಳೆ ಕೇರಳದ ಶಿಕ್ಷಣ ಸಂಸ್ಥೆಯೊಂದರಲ್ಲಿ ವಿದ್ಯಾರ್ಥಿನಿಯರಿಗೆ ಒಳ ಉಡುಪು ಕಳಚಿ ಪರೀಕ್ಷೆ ಬರೆಯುವಂತೆ ಮಾಡಲಾಗಿತ್ತು ಎಂಬ ಗುರುತರ ಆರೋಪ ಕೇಳಿ ಬಂದಿತ್ತು.
ಈ ಕುರಿತಂತೆ ವಿದ್ಯಾರ್ಥಿನಿಯೊಬ್ಬರು ತನ್ನ ಪೋಷಕರ ಬಳಿ ವಿಷಯ ತಿಳಿಸಿದಾಗ ಇದು ಬಹಿರಂಗವಾಗಿ ವಿವಾದಕ್ಕೆ ಕಾರಣವಾಗಿದ್ದು, ಆ ನಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ವಿಚಾರಣೆ ಬಳಿಕ ‘ನೀಟ್’ ಪರೀಕ್ಷೆಯಲ್ಲಿ ಕಾರ್ಯನಿರ್ವಹಿಸಿದ್ದ ಐವರು ಮಹಿಳೆಯರನ್ನು ಬಂಧಿಸಿದ್ದಾರೆ. ಈ ಪೈಕಿ ಮೂವರನ್ನು ಎನ್.ಟಿ.ಎ. ಖಾಸಗಿ ಏಜೆನ್ಸಿ ಒಂದರ ಮೂಲಕ ನೇಮಿಸಿಕೊಂಡಿದ್ದರೆ ಇನ್ನಿಬ್ಬರು ಶಿಕ್ಷಣ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ.