ಕೆಲವರಿಗೆ ಮನೆಮುಂದೆ ಪುಟ್ಟಪುಟ್ಟ ಪಾಟ್ ಇಟ್ಟು ಗಿಡಗಳನ್ನು ಬೆಳೆಸುವ ಆಸೆ. ಆದರೆ ಈಗಿನ ದಿನಗಳಲ್ಲಿ ಗಿಡಗಳನ್ನು ಪೋಷಿಸಲು ಟೈಮ್ ಸಿಗುವುದಿಲ್ಲ ಅಥವಾ ಮನೆ ಮುಂದೆ ಜಾಗ ಸಮಸ್ಯೆ ಹೀಗೆ ಏನಾದರೂ ಕಾರಣಗಳು ಇರುತ್ತವೆ.
ಆದರೂ ತಮ್ಮ ತಮ್ಮ ಬಿಡುವಿನ ವೇಳೆಯಲ್ಲಿ ಈ ಗಿಡಗಳನ್ನು ಮನೆ ಮುಂದೆ ಬೆಳೆಸಿ ಪೋಷಿಸಿದರೆ ನಮ್ಮ ಆರೋಗ್ಯಕ್ಕೂ ಒಳ್ಳೆಯದು. ಯಾವುದು ಆ ಗಿಡಗಳು ಅಂತ ತಿಳಿದುಕೊಳ್ಳೋಣ.
ಅಲೋವೆರಾ
ಇದು ಗಾಳಿಯನ್ನು ಶುದ್ಧ ಮಾಡುವ ಗುಣ ಹೊಂದಿದೆ. ಅಷ್ಟೇ ಅಲ್ಲ, ಸೌಂದರ್ಯ ಸಮಸ್ಯೆಗೆ ಮತ್ತು ಆರೋಗ್ಯ ಸಮಸ್ಯೆಗೆ ಈ ಅಲೋವೆರಾ ಸಹಕಾರಿ.
ಪುದೀನಾ
ಇದು ನೈಸರ್ಗಿಕ ನಂಜು ನಿರೋಧಕ. ಅಡುಗೆಗೆ ಅಷ್ಟೇ ಅಲ್ಲದೆ ಔಷಧಿಯಾಗಿಯೂ ಮತ್ತು ಸೌಂದರ್ಯವರ್ಧಕವಾಗಿಯೂ ಪುದೀನಾ ಬಳಕೆಯಾಗುತ್ತದೆ.
ತುಳಸಿ
ತುಳಸಿಗೆ ಮನೆಯಲ್ಲಿ ಪೂಜ್ಯ ಸ್ಥಾನವಿದೆ. ಮಕ್ಕಳಿದ್ದ ಮನೆಯಲ್ಲಂತೂ ತುಳಸಿ ಗಿಡ ಇರಲೇಬೇಕು. ಬಹುಪಯೋಗಿ ತುಳಸಿ ಆರೋಗ್ಯ ಸಮಸ್ಯೆಗಳಿಗೆ ಅಷ್ಟೇ ಅಲ್ಲದೆ ಸೌಂದರ್ಯ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ಲ್ಯಾವೆಂಡರ್
ಈ ಗಿಡದಿಂದ ಒತ್ತಡ ನಿವಾರಣೆ ಆಗುತ್ತದೆ. ಸೌಂದರ್ಯ ವೃದ್ಧಿಸುವುದರಲ್ಲಿ ಇದರ ಪಾತ್ರ ಹೆಚ್ಚು.