ಸಣ್ಣ ಸಣ್ಣ ವಿಚಾರಕ್ಕೆ ಕೆಲವರ ಕಣ್ಣಲ್ಲಿ ನೀರು ಬರುತ್ತದೆ. ಚಿಕ್ಕಪುಟ್ಟ ವಿಚಾರಕ್ಕೂ ಅಳುವವರಿದ್ದಾರೆ. ಗಂಡು ಮಕ್ಕಳು ಕಣ್ಣಲ್ಲಿ ನೀರು ಹಾಕಿದ್ರೆ ಅದ್ಯಾಕೆ ಹೆಣ್ಣು ಮಕ್ಕಳ ರೀತಿ ಅಳ್ತೀಯಾ ಅಂತಾರೆ ಜನ.
ಅದೇ ಹೆಣ್ಣು ಮಕ್ಕಳು ಅಳುತ್ತಿದ್ದರೆ `ಅಳು ಮುಂಜಿ’ ಅಂತಾ ಹೊಸ ನಾಮಕರಣ ಮಾಡ್ತಾರೆ. ನೀವು ಅಳುವವರಲ್ಲಿ ಮುಂದಿದ್ದರೆ ಮುಜುಗರಪಟ್ಟುಕೊಳ್ಳಬೇಕಾಗಿಲ್ಲ. ನಾವು ಹೇಳೋ ಸುದ್ದಿ ಕೇಳಿ ಖುಷಿಪಡಿ.
ವಾಸ್ತವವಾಗಿ ಸಣ್ಣ ಸಣ್ಣ ವಿಚಾರಕ್ಕೂ ಕಣ್ಣಲ್ಲಿ ನೀರು ಹಾಕುವವರು ದುರ್ಬಲರಲ್ಲ. ಸಂಶೋಧಕರ ಪ್ರಕಾರ, ಸ್ವಭಾವದಲ್ಲಿ ಅವರು ತುಂಬಾ ಒಳ್ಳೆಯವರಾಗಿರುತ್ತಾರಂತೆ. ಉತ್ತಮ ಗುಣ ಹೊಂದಿರುತ್ತಾರಂತೆ. ನೀವು ಅಳುವವರಲ್ಲಿ ಒಬ್ಬರಾಗಿದ್ದರೆ ನಿಮ್ಮನ್ನು ನೀವು ದುರ್ಬಲರು ಎಂದು ಭಾವಿಸಬೇಡಿ. ಬೇರೆಯವರು ಏನಂದುಕೊಳ್ತಾರೋ ಅಂತಾ ಚಿಂತೆ ಮಾಡಬೇಡಿ. ಅಳೋದು ಒಂದು ಒಳ್ಳೆ ಗುಣ ಎಂಬುದು ನೆನನಪಿರಲಿ.
ಖಿನ್ನತೆ, ಒತ್ತಡ ಹೋಗಲಾಡಿಸಲು ಅಳು ಬೆಸ್ಟ್ ಔಷಧಿ ಅಂದ್ರೆ ನೀವು ನಂಬಲೇಬೇಕು. ಖಿನ್ನತೆ ಮನೆ ಮಾಡಿದ್ದರೆ ಮನಸ್ಸಿನಲ್ಲಿ ನೆಗೆಟಿವಿಟಿ ಹೆಚ್ಚಾಗಿ ಅನೇಕ ಸಮಸ್ಯೆಗಳು ಶುರುವಾಗುತ್ತವೆ. ಒತ್ತಡ, ಖಿನ್ನತೆ ನಿಮ್ಮನ್ನು ಕಾಡುತ್ತಿದ್ದರೆ ಸಣ್ಣ ಮಕ್ಕಳಂತೆ ಬಿಕ್ಕಿ ಬಿಕ್ಕಿ ಅತ್ತುಬಿಡಿ. ಇದ್ರಿಂದ ನಿಮ್ಮ ಮನಸ್ಸಿನಲ್ಲಿರುವ ಭಾರ ಕಡಿಮೆಯಾಗುತ್ತದೆ.