alex Certify BIG NEWS: ಎಸಿಬಿ ಅಧಿಕಾರಿಗಳ ಹೆಸರಲ್ಲಿ ಬೆದರಿಕೆ; ಪೊಲೀಸ್ ಪೇದೆ ಸೇರಿ ಮೂವರು ಆರೋಪಿಗಳು ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಎಸಿಬಿ ಅಧಿಕಾರಿಗಳ ಹೆಸರಲ್ಲಿ ಬೆದರಿಕೆ; ಪೊಲೀಸ್ ಪೇದೆ ಸೇರಿ ಮೂವರು ಆರೋಪಿಗಳು ಅರೆಸ್ಟ್

ಕೋಲಾರ: ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ನಾರಾಯಣಗೌಡ ಎಂಬುವವರಿಗೆ ಎಸಿಬಿ ಅಧಿಕಾರಿಗಳೆಂದು ಕರೆ ಮಾಡಿ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ನಕಲಿ ಅಧಿಕಾರಿಗಳನ್ನು ಕೋಲಾರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರನ್ನು ಚಿಕ್ಕೋಡಿಯ ಸಾದಲಗ ಮೂಲದ ಮುರಿಗಪ್ಪ, ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ರಾಜೇಶ್ ಹಾಗೂ ಸಕಲೇಶಪುರದ ರಜನಿಕಾಂತ್ ಎಂದು ಗುರುತಿಸಲಾಗಿದೆ. ಆರೋಪಿ ಮುರಿಗಪ್ಪ ಈ ಹಿಂದೆ ಪೊಲೀಸ್ ಪೇದೆಯಾಗಿದ್ದಾಗ ಡಿಸ್ ಮಿಸ್ ಆಗಿದ್ದ ಎಂದು ತಿಳಿದುಬಂದಿದೆ.

ನಿರ್ಮಿತಿ ಕೇಂದ್ರದ ಅಧಿಕಾರಿ ನಾರಾಯಣಗೌಡ ಅವರಿಗೆ ಕರೆ ಮಾಡಿದ್ದ ಆರೋಪಿಗಳು ತಾವು ಎಸಿಬಿ ಅಧಿಕಾರಿಗಳು. ನಿಮ್ಮ ವಿರುದ್ಧ ದೂರು ಬಂದಿದ್ದು, ನಿಮ್ಮ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸುವುದಾಗಿ ಹೇಳಿದ್ದರು. ಅಲ್ಲದೇ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಇದರಿಂದ ಅನುಮಾನಗೊಂಡ ನಾರಾಯಣಗೌಡ ಕೋಲಾರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣದ ಬೆನ್ನು ಹತ್ತಿದ್ದ ಪೊಲಿಸರು,ಇದೀಗ ಬಾಗಲಕೋಟೆಯಲ್ಲಿ ಮೂವರು ನಕಲಿ ಎಸಿಬಿ ಅಧಿಕಾರಿಗಳನ್ನು ಬಂಧಿಸಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...