ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಪುರುಷರ ಸರಿಸಮಾನವಾಗಿ ದುಡಿಯುತ್ತಿದ್ದಾರೆ. ಇನ್ನೂ ಕೆಲ ಕ್ಷೇತ್ರಗಳಲ್ಲಿ ಮಹಿಳೆಯರು ಕೆಲಸ ಮಾಡುವುದು ಅಸಾಧ್ಯ ಅನ್ನುವ ಹಾಗಿರುತ್ತೆ. ಆದರೂ ಮಹಿಳೆಯರು ಹಿಂದೇಟು ಹಾಕುತ್ತಿಲ್ಲ, ಗಟ್ಟಿ ಧೈರ್ಯ ಮಾಡಿ ಅಲ್ಲೂ ಕೂಡಾ ತಾವು ಎಷ್ಟು ಸಾಮರ್ಥ್ಯರು ಅಂತ ಸಾಬೀತು ಪಡಿಸುತ್ತಿದ್ಧಾರೆ.
ಇಂದು ಐಟಿ-ಬಿಟಿ ಕ್ಷೇತ್ರ, ಸರಕಾರಿ ಕೆಲಸಗಳನ್ನ ಹೊರತುಪಡಿಸಿ ಆಟೋ ಓಡಿಸುವುದು, ಕಾರು ಡ್ರೈವ್ ಮಾಡೋದನ್ನ ನಾವೆಲ್ಲ ನೋಡಿರ್ತೆವೆ. ಈಗ ಲಾರಿ ಓಡಿಸೋದ್ರಲ್ಲೂ ತಾವು ಸೈ ಅಂತ ತೋರಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ ಅಂತಹದ್ದೇ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಟ್ರಕ್ ಓಡಿಸುತ್ತಿದ್ದಾರೆ. ಟ್ರಕ್ ಓಡಿಸುವಾಗ ಆಕೆಯ ಮುಖದಲ್ಲಿ ಆತ್ಮವಿಶ್ವಾಸದ ನಗು ಎಂಥವರ ಹೃದಯ ಕೂಡಾ ಗೆಲ್ಲುವ ಹಾಗಿತ್ತು.
ಮನುಷ್ಯರಿಗೆ ಜೀವನದಲ್ಲಿ ಕಷ್ಟ ಬರುವುದು ಸಹಜ. ಅದನ್ನ ಮೆಟ್ಟಿ ನಿಲ್ಲುವುದೇ ಅಸಲಿ ತಾಕತ್ತು. ಅದು ಪುರುಷರಾದರೂ ಅಷ್ಟೆ, ಮಹಿಳೆಯಾದರೂ ಅಷ್ಟೆ. ಅದನ್ನ ನಗ್ತಾ ನಗ್ತಾ ಎದುರಿಸಬೇಕು ಅಂತ ಹೇಳುವ ಹಾಗಿತ್ತು ಈ ಮಹಿಳೆಯ ನಗು. ಎಷ್ಟೋ ಜನರಿಗೆ ಆಕೆ ಮಾಡುವ ಕೆಲಸ ಮತ್ತು ಆಕೆಯ ನಗು ಸ್ಪೂರ್ತಿಯಾಗಿದೆ. ಇಂತಹ ನಗು, ಆತ್ಮವಿಶ್ವಾಸ ಇದ್ದರೆ ಯಾರಾದರೂ ಅಷ್ಟೇ, ತಾವು ಅಂದುಕೊಂಡಿದ್ದನ್ನ ಸಾಧಿಸಬಹುದು.
@karthik_nmkl ಹೆಸರಿನ Twitter ಖಾತೆಯಲ್ಲಿ ಈ ವಿಡಿಯೋವನ್ನ ಹಂಚಿಕೊಳ್ಳಲಾಗಿದೆ. ಮಹಿಳಾ ಟ್ರಕ್ ಚಾಲಕಿ ನಗು ಕುರಿತು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಒಂದೇ ಒಂದು ನಗು, ಉತ್ತಮ ದಿನವನ್ನಾಗಿ ಮಾಡುತ್ತೆ ಅಂತ ನೆಟ್ಟಿಗರು ಈ ವಿಡಿಯೋ ನೋಡಿ ಹೇಳುತ್ತಿದ್ದಾರೆ. ಅಷ್ಟೆ ಅಲ್ಲ ಓರ್ವ ಮಹಿಳೆ ಟ್ರಕ್‌ನ ಇಷ್ಟು ಚೆನ್ನಾಗಿ ಚಲಾಯಿಸಬಲ್ಲಳು ಅಂತ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್‌ಆಗಿದ್ದಂತೂ ಸುಳ್ಳಲ್ಲ.
https://twitter.com/GANESHC14579242/status/1548747602719809536?ref_src=twsrc%5Etfw%7Ctwcamp%5Etweetembed%7Ctwterm%5E1548747602719809536%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftamil-nadu-woman-drives-truck-on-highway-in-viral-video-internet-gives-a-grand-salute-1976950-2022-07-18