ಒಂದೊಳ್ಳೆ ರೆಸ್ಟೋರೆಂಟ್ ನಲ್ಲಿ ಊಟ ಮಾಡಬೇಕು ಅಂದುಕೊಂಡಾಗ ಅಲ್ಲಿಗೆ ಹೋಗಿ ತಮಗಿಷ್ಟ ಬಂದಿದ್ದು ಆರ್ಡರ್ ಮಾಡಿ ತಿಂದಾದ ಬಳಿಕ ಬಿಲ್ ನೋಡಿ ಒಮ್ಮೆ ಶಾಕ್ ಆಗೋದು ಇದ್ದಿದ್ದೇ. ಆದರೆ, ಸ್ಟೀಕ್ ಬೇಯಿಸುವುದಕ್ಕಾಗಿ ಅಡುಗೆ ಅನಿಲ ಖರೀದಿಸಲು ಹೋದ ಅಮೆರಿಕಾದ ಈ ವ್ಯಕ್ತಿ ಬಂಪರ್ ಲಾಟರಿ ಗೆದ್ದಿದ್ದಾರೆ.
ಹೌದು, ಈ ವ್ಯಕ್ತಿ ಲಾಟರಿ ಗೆದ್ದ ಬಹುಮಾನದ ಮೊತ್ತ ಕೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಾ. ಈತ ಲಾಟರಿಯಲ್ಲಿ ಗೆದ್ದಿದ್ದು ಬರೋಬ್ಬರಿ 100000 ಡಾಲರ್ (ರೂ. 80 ಲಕ್ಷ) ಮೊತ್ತವನ್ನು..! ಅಚ್ಚರಿ ಎನಿಸಿದ್ರು ಇದು ಸತ್ಯ. ಬಂಪರ್ ಲಾಟರಿ ತನ್ನದಾಗಿಸಿಕೊಂಡ ವ್ಯಕ್ತಿಯ ಹೆಸರು ಜೋನ್ಸ್ ಎಂದು.
ದಿನದ ಆರಂಭದಲ್ಲಿ, ಎಕ್ಸ್‌ಟ್ರೀಮ್ ಕ್ಯಾಶ್ ಸ್ಕ್ರ್ಯಾಚ್-ಆಫ್ ಟಿಕೆಟ್‌ನಿಂದ 500 ಡಾಲರ್ ಬಹುಮಾನವನ್ನು ಗೆದ್ದರು. ಹೀಗಾಗಿ ಅವರು ಮತ್ತೊಮ್ಮೆ ತಮ್ಮ ಅದೃಷ್ಟವನ್ನು ಪ್ರಯತ್ನಿಸಲು ನಿರ್ಧರಿಸಿದ್ರು. 100 ಡಾಲರ್ ಮಿಲಿಯನ್ ಮೆಗಾ ನಗದು ಟಿಕೆಟ್ ಖರೀದಿಸಿದರು. ಒಂದೇ ದಿನ ಎರಡು ಬಾರಿ ಅದೃಷ್ಟ ಅವರ ಕೈಹಿಡಿದಿತ್ತು. ಈ ವೇಳೆ ಜೋನ್ಸ್ ಬರೋಬ್ಬರಿ 100000 ಡಾಲರ್ (ಅಂದಾಜು 80 ಲಕ್ಷ ರೂ.) ಬಹುಮಾನವನ್ನು ಗೆದ್ದುಕೊಂಡಿದ್ದಾರೆ. ಈ ಹಣವನ್ನು ತನ್ನ ಮದುವೆಗಾಗಿ ಖರ್ಚು ಮಾಡಲು ನಿರ್ಧರಿಸಿದ್ದಾನಂತೆ.