alex Certify ಕ್ಯಾಮರಾದಲ್ಲಿ ಸೆರೆಯಾಗಿದೆ ವಿಚಿತ್ರ ಜೀವಿ…! ವಿಡಿಯೋ ನೋಡಿ ದಿಗ್ಭ್ರಮೆಗೊಳಗಾಗಿದ್ದಾರೆ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಚಿತ್ರ ಜೀವಿ…! ವಿಡಿಯೋ ನೋಡಿ ದಿಗ್ಭ್ರಮೆಗೊಳಗಾಗಿದ್ದಾರೆ ನೆಟ್ಟಿಗರು

ಕೆಲವೊಮ್ಮೆ ನಮ್ಮ ಊಹೆಗೂ ನಿಲುಕದಂತಹ ಕೆಲವೊಂದು ಘಟನೆಗಳು ಕ್ಯಾಮರಾದಲ್ಲಿ ಸೆರೆಯಾಗಿಬಿಡುತ್ತವೆ. ವಿಚಿತ್ರ ಜೀವಿಗಳ ವಿಡಿಯೋ, ಫೋಟೋಗಳಂತೂ ಆಗಾಗ ವೈರಲ್‌ ಆಗುತ್ತಲೇ ಇರುತ್ತವೆ. ಅವು ಅನ್ಯಗ್ರಹದಿಂದ ಬಂದ ಏಲಿಯನ್‌ಗಳಿರಬಹುದು ಅನ್ನೋ ಲೆಕ್ಕಾಚಾರವಂತೂ ಬಹಳ ವರ್ಷಗಳಿಂದ್ಲೂ ಇದೆ. ಆದ್ರೆ ಇದುವರೆಗೂ ಏಲಿಯನ್‌ಗಳು ಬರಿಗಣ್ಣಿಗೆ ಕಾಣಿಸಿಕೊಂಡಿಲ್ಲ.

ಇದೀಗ ಅಮೆರಿಕದಲ್ಲಿ ಸೆರೆಯಾದ ವಿಡಿಯೋ ಒಂದು ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ. ವಿಚಿತ್ರ ಆಕಾರದ ಜೀವಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಇದು ಕೂಡ ಅನ್ಯಗ್ರಹದ ಜೀವಿಯೇ ಇರಬಹುದು ಅನ್ನೋದು ಎಲ್ಲರ ಊಹೆ. ಅನ್ಯಗ್ರಹ ಜೀವಿಗಳು ನಿಜವಾಗಿಯೂ ನಮ್ಮ ನಡುವೆ ಇದ್ದಾರೆಯೇ ಎಂಬ ಪ್ರಶ್ನೆಯನ್ನೂ ಇದು ಹುಟ್ಟುಹಾಕಿದೆ.

ಮ್ಯಾಗಜೀನ್ ಒಂದು ಈ ವಿಚಿತ್ರ ಜೀವಿಯ ವಿಡಿಯೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಮೋರ್‌ಹೆಡ್‌ನ ಬೀದಿಯಲ್ಲಿ ಆ ಜೀವಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಇದು. ಚಿತ್ರ ಅಸ್ಪಷ್ಟವಾಗಿ ಮಸುಕಾಗಿದೆ. ಆ ವಿಲಕ್ಷಣ ಜೀವಿ ಕೆಳಕ್ಕೆ ಬಾಗಿ ಏನನ್ನೋ ಹುಡುಕಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ಸೆಕ್ಯೂರಿಟಿ ಕ್ಯಾಮರಾದಲ್ಲಿ ಈ ವಿಡಿಯೋ ರೆಕಾರ್ಡ್‌ ಆಗಿದೆ. ಸುಮಾರು 6 ಲಕ್ಷಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಬಗೆಬಗೆಯಾಗಿ ಕಾಮೆಂಟ್‌ ಕೂಡ ಮಾಡಿದ್ದಾರೆ. ಕೆಲವರು ಈ ವಿಡಿಯೋ ಸುಳ್ಳು ಅಂದ್ರೆ ಇನ್ನು ಕೆಲವರು ಬೇರೆ ಪ್ರಪಂಚದ ಜೀವಿ ಇರಬಹುದು ಎನ್ನುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...