ಅಡಾಲ್ಟ್ ಹಿಟ್ಲರ್ಗೆ ಸೇರಿದ್ದು ಎನ್ನಲಾದ ಆರಿಸ್ಟ್ ವಾಚ್ನ್ನು ಅಲೆಕ್ಸಾಂಡರ್ ಹಿಸ್ಟಾರಿಕಲ್ ಹರಾಜಿಗೆ ಇರಿಸಿದೆ. ಚಿನ್ನದಿಂದ ನಿರ್ಮಿತಗೊಂಡಿರುವ ಈ ಕೈ ಗಡಿಯಾರವನ್ನು ಹಿಟ್ಲರ್ಗೆ 1933 ಏಪ್ರಿಲ್ 20ರಂದು ನೀಡಲಾಯ್ತು ಎಂದು ಅಂದಾಜಿಸಲಾಗಿದೆ. ಅಂದು ಅವರ44ನೇ ವರ್ಷದ ಹುಟ್ಟು ಹಬ್ಬವಾಗಿತ್ತು.
ಫ್ರೆಂಚ್ ಸೈನಿಕರು 1945ರ ಮೇ 4ರಂದು ಯುದ್ಧದ ಸಂದರ್ಭದಲ್ಲಿ ಈ ವಾಚ್ನ್ನು ಲೂಟಿ ಮಾಡಿದ್ದನು ಎಂದು ಹೇಳಲಾಗುತ್ತದೆ. ಆದರೆ ವಾಚು ತಯಾರಕ ಕಂಪನಿ Jaeger-LeCoultre ಈ ವಾಚ್ನ ಸತ್ಯಾಸತ್ಯತೆಯ ಬಗ್ಗೆ ಅಧಿಕೃತವಾಗಿ ಹೇಳಲು ಸಾಧ್ಯವಿಲ್ಲ ಎಂದಿದೆ. ಇದನ್ನು ಅಧಿಕೃತವಾಗಿ Jaeger-LeCoultre ಕಂಪನಿಯ ವಾಚ್ ಎಂದು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಕಂಪನಿಯು ತನ್ನ ಬೌದ್ಧಿಕ ಆಸ್ತಿಯ ರಕ್ಷಣೆಗೆ ಬದ್ಧವಾಗಿದೆ ಮತ್ತು ವಂಚನೆಗಳು ಮತ್ತು ನಕಲಿಗಳ ಮಾರಾಟವನ್ನು ತಡೆಯಲು ಅಗತ್ಯವಿರುವ ಎಲ್ಲಾ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧವಾಗಿದೆ,”ಎಂದು ಹೇಳಿಕೆ ನೀಡಿದೆ.
ಅಲೆಕ್ಸಾಂಡರ್ ಹಿಸ್ಟಾರಿಕಲ್ ಹರಾಜು ಪ್ರಕ್ರಿಯೆ ಹೇಳುವಂತೆ ಆಂಡ್ರಿಯಾಸ್ ಹ್ಯೂಬರ್‌ನಿಂದ ಯಾವುದೇ ದಾಖಲೆಗಳನ್ನು ಪಡೆದಿಲ್ಲ, ಏಕೆಂದರೆ ಅವರ ಕಾರ್ಖಾನೆಯು ಎರಡನೇ ಮಹಾಯುದ್ಧದ ಸಮಯದಲ್ಲಿ ಬಾಂಬ್ ದಾಳಿಗೊಳಗಾದ ಮತ್ತು ನಂತರ ಸುಟ್ಟುಹೋಯಿತು.