alex Certify ಚಲಿಸುತ್ತಿದ್ದ ಟ್ರಕ್​ ಮೇಲೆ ಹುಚ್ಚಾಟ: ಬೆಚ್ಚಿಬೀಳಿಸುವಂತಿದೆ ಸರ್ಕಸ್​ ಮಾಡಲು ಹೋಗಿ ಆಯತಪ್ಪಿ ಬಿದ್ದ ಯುವಕನ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ಟ್ರಕ್​ ಮೇಲೆ ಹುಚ್ಚಾಟ: ಬೆಚ್ಚಿಬೀಳಿಸುವಂತಿದೆ ಸರ್ಕಸ್​ ಮಾಡಲು ಹೋಗಿ ಆಯತಪ್ಪಿ ಬಿದ್ದ ಯುವಕನ ವಿಡಿಯೋ

ಇಂಟರ್​ನೆಟ್​ನಲ್ಲಿ ಸಾಹಸಮಯ ವಿಡಿಯೋಗಳಿಗೆ ಏನೂ ಬರವಿಲ್ಲ. ಲೈಕ್ಸ್​ ಹಾಗೂ ವೀವ್ಸ್​ ಪಡೆಯುವ ಸಲುವಾಗಿ ಯುವ ಜನತೆ ಜೀವವನ್ನು ಅಪಾಯಕ್ಕೆ ದೂಡಲೂ ಸಹ ತಯಾರಿದೆ. ಇದೇ ಮಾತಿಗೆ ಸಾಕ್ಷಿ ಎಂಬಂತೆ ಉತ್ತರ ಪ್ರದೇಶ ಪೊಲೀಸ್​​ ಶೇರ್​ ಮಾಡಿರುವ ವಿಡಿಯೋದಲ್ಲಿ ಕಸದ ಟ್ರಕ್​ ಮೇಲೆ ಪುಶಪ್​ ಮಾಡುವುದನ್ನು ಕಾಣಬಹುದಾಗಿದೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಅಂದಹಾಗೆ ಯುವಕ ಸಾಹಸ ಮಾಡುತ್ತಿದ್ದ ಟ್ರಕ್​ ನಿಂತುಕೊಂಡಿರಲಿಲ್ಲ. ಬದಲಾಗಿ ಅದು ಚಲಿಸುತ್ತಿತ್ತು. ಇದನ್ನು ನೋಡುವಾಗಲೇ ಅಪಾಯಕಾರಿ ಎಂದು ಎನಿಸಿದರೂ ಸಹ ಆತ ಮಾತ್ರ ಪುಶಪ್ಸ್​ಗಳನ್ನು ಮಾಡುತ್ತಲೇ ನೆಟ್ಟಿಗರನ್ನು ಬೆಚ್ಚಿ ಬೀಳಿಸಿದ್ದಾನೆ. ತನ್ನ ಸಾಹಸವನ್ನು ಪ್ರದರ್ಶಿಸಿದ ಬಳಿಕ ಅದನ್ನು ಎಂಜಾಯ್​ ಮಾಡಲು ಚಲಿಸುತ್ತಿದ್ದ ವಾಹನದ ಮೇಲೆ ನಿಲ್ಲಲ್ಲು ಯತ್ನಿಸಿದ್ದಾನೆ.

ಕೆಲವೇ ಕೆಲವು ಸೆಕೆಂಡ್​ಗಳಲ್ಲಿ ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡ ವ್ಯಕ್ತಿಯು ಟ್ರಕ್​​ನಿಂದ ಸೀದಾ ರಸ್ತೆಗೆ ಬೀಳುತ್ತಾನೆ. ಇಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಆತನಿಗೆ ಅನೇಕ ಗಾಯಗಳಾಗಿದೆ. ಆತನಿಗೆ ಯಾವ ರೀತಿಯಲ್ಲಿ ಗಾಯವಾಗಿದೆ ಎಂದರೆ ಆತನಿಗೆ ಕೆಲವು ದಿನಗಳ ಕಾಲ ಕುಳಿತುಕೊಳ್ಳಲೂ ಸಹ ಸಾಧ್ಯವಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...