alex Certify ನಾನು ಸೇರ್ಪಡೆಗೊಂಡಾಗ ಬಿಸಿಸಿಐ ನಲ್ಲಿದ್ದದ್ದು ಕೇವಲ 40 ಕೋಟಿ ರೂಪಾಯಿ; ಲಲಿತ್‌ ಮೋದಿ ಹೇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಸೇರ್ಪಡೆಗೊಂಡಾಗ ಬಿಸಿಸಿಐ ನಲ್ಲಿದ್ದದ್ದು ಕೇವಲ 40 ಕೋಟಿ ರೂಪಾಯಿ; ಲಲಿತ್‌ ಮೋದಿ ಹೇಳಿಕೆ

ಐಪಿಎಲ್​ ಮೂಲಕ ಪ್ರಖ್ಯಾತಗೊಂಡ ಉದ್ಯಮಿ ಲಲಿತ್​ ಮೋದಿ, ಬಿಸಿಸಿಐ ಜವಾಬ್ದಾರಿಯಲ್ಲಿದ್ದಾಗ ಆದ ಬೆಳವಣಿಗೆಯ ಮಾಹಿತಿಯನ್ನು ಈಗ ನೆನಪಿಸಿಕೊಂಡಿದ್ದಾರೆ.

ಇಂಡಿಯನ್​ ಪ್ರೀಮಿಯರ್​ ಲೀಗ್​ (ಐಪಿಎಲ್​) ಪ್ರಾರಂಭದಿಂದ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಸಂಪತ್ತನ್ನು ಅನೇಕ ಪಟ್ಟು ಹೆಚ್ಚಿಸಲು ತಾನು ಸಹಾಯ ಮಾಡಿದ್ದೇನೆ ಎಂದು ಲಲಿತ್​ ಮೋದಿ ಧೈರ್ಯದಿಂದ ಹೇಳಿಕೊಂಡಿದ್ದಾರೆ. 2008 ರಲ್ಲಿ ಲಲಿತ್​ ಮೋದಿ ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ನ ಪ್ರಾರಂಭದ ಹಿಂದಿನ ಪ್ರಮುಖ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. 2010 ರವರೆಗೆ ಐಪಿಎಲ್​ಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಮಾಜಿ ಐಪಿಎಲ್​ ಚೇರ್ಮನ್​ ಲಲಿತ್​ ಹಾಗೂ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್​ ನಟಿ ಸುಶ್ಮಿತಾ ಸೇನ್​ ಅವರೊಂದಿಗಿನ ಸಂಬಂಧವನ್ನು ಘೋಷಿಸಿದ ನಂತರ ಕಳೆದೆರಡು ದಿನಗಳಿಂದ ಸಾಮಾಜಿಕ ಮಾಧ್ಯಮದಲ್ಲಿ ಗಮನ ಸೆಳೆದಿದ್ದಾರೆ.

ರಿಗ್ಗಿಂಗ್​ ಬಿಡ್​ಗಳು, ಆಡಳಿತ ಮಂಡಳಿಯ ಅನುಮೋದನೆಯಿಲ್ಲದೆ ನಿರ್ಧಾರಗಳನ್ನು ತೆಗೆದುಕೊಂಡಿರುವುದು, ಅಕ್ರಮ ಹಣ ವರ್ಗಾವಣೆ ಮತ್ತು ಬೆಟ್ಟಿಂಗ್​ ಸೇರಿದಂತೆ ಒಟ್ಟು 8 ಆರೋಪಗಳಲ್ಲಿ ತಪ್ಪಿತಸ್ಥರೆಂದು ಸಾಬೀತಾದ ನಂತರ 2013 ರಲ್ಲಿ ಬಿಸಿಸಿಐನಿಂದ ಆಜೀವ ನಿಷೇಧಕ್ಕೊಳಗಾದ ಮಾಜಿ ಐಪಿಎಲ್​ ಅಧ್ಯಕ್ಷರನ್ನು ಹಲವರು ಟ್ರೋಲ್​ ಮಾಡಿದ್ದಾರೆ.

ಆದರೆ, ಅವರು ಇತ್ತೀಚೆಗೆ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್​ ಅನ್ನು ಹಂಚಿಕೊಂಡಿದ್ದು ತಾನು “ವಜ್ರದ ಚಮಚ’ದೊಂದಿಗೆ ಹುಟ್ಟಿದ್ದು, ‘ಯಾರಿಂದಲೂ ಲಂಚ ಪಡೆದಿಲ್ಲ’ ಎಂದಿದ್ದಾರೆ. ಭಾರತ ಸರ್ಕಾರದಿಂದ ಯಾವುದೇ ಫೇವರ್​ ಪಡೆದಿಲ್ಲ ಎಂದು ಹೇಳಿಕೊಂಡಿದ್ದಾರೆ.

ತಮ್ಮ ಪೋಸ್ಟ್​ನಲ್ಲಿ ಮೋದಿ ಅವರು ಬಿಸಿಸಿಐ ಜೊತೆಗಿನ ತಮ್ಮ ವ್ಯವಹಾರದ ಬಗ್ಗೆ ಹೇಳಿಕೊಂಡರು, ಭಾರತೀಯ ಕ್ರಿಕೆಟ್​ ಮಂಡಳಿಯ ಬ್ಯಾಂಕ್ ಬ್ಯಾಲೆನ್ಸ್​ 40 ಕೋಟಿ ರೂ. ಇತ್ತು, ತಮ್ಮನ್ನು ವಜಾ ಮಾಡಿದಾಗ 47,680 ಕೋಟಿ‌ ರೂ. ಹೊಂದಿತ್ತು ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...