ಬೆಂಗಳೂರು: ತುಂಗಭದ್ರಾ ಡ್ಯಾಂ ನ ಪ್ರಸ್ತುತ ಹೊರಹರಿವು 1.5 ಲಕ್ಷ ಕ್ಯೂಸೆಕ್ ಆಗಿದೆ, 32 ಗೇಟ್‌ಗಳೊಂದಿಗೆ 6.25 ಲಕ್ಷ ಕ್ಯೂಸೆಕ್‌ವರೆಗೆ ಪ್ರವಾಹವನ್ನು ನಿರ್ವಹಿಸಲಾಗುತ್ತಿದ್ದು,
ಕಳೆದ 25 ವರ್ಷಗಳಲ್ಲಿಯೇ ಇದು ಗರಿಷ್ಠ ಪ್ರಮಾಣದ ಪ್ರವಾಹವಾಗಿದೆ ಎಂದು ನೀರಾವರಿ ಇಲಾಖೆ ತಿಳಿಸಿದೆ.
ತುಂಗಭದ್ರಾ ಜಲಾಶಯದಲ್ಲಿ ಗರಿಷ್ಠ ಪ್ರಮಾಣದಲ್ಲಿ 3.69 ಲಕ್ಷ ಕ್ಯೂಸೆಕ್ ನೀರು ಇದೆ. ಅಣೆಕಟ್ಟಿನ 33 ಗೇಟ್‌ಗಳಲ್ಲಿ ಒಂದು ಗೇಟ್ ಗೇರ್ ಬಾಕ್ಸ್ ಸಮಸ್ಯೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಗೇಟ್ ಸಂಖ್ಯೆ 21 ಗೇರ್ ಬಾಕ್ಸ್ ಸಮಸ್ಯೆಯಾಗಿದೆ. 32 ಗೇಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಎಲ್ಲಾ 32 ಗೇಟ್‌ಗಳನ್ನು ತೆರೆಯಲಾಗಿದೆ.
ಈ ವಾರದಲ್ಲಿ ಆ ಒಂದು ಗೇಟ್ ಕೂಡ ದುರಸ್ತಿಯಾಗಲಿದ್ದು ಆತಂಕ ಪಡುವ ಅಗತ್ಯವಿಲ್ಲ ಎಂದು ಟಿಬಿ ಡ್ಯಾಂ ಮಂಡಳಿ ಕಾರ್ಯದರ್ಶಿ ಭರವಸೆ ನೀಡಿದ್ದಾರೆ.