ಕೋವಿಡ್ 19 ವ್ಯಾಕ್ಸಿನ್ ತೆಗೆದುಕೊಳ್ಳಲು ಹೆದರಿ ಓಡುವವರನ್ನು ನೋಡಿದ್ದೀರಾ. ಕೆಲವರು ಓಡಿ ಹೋಗೆ ಮನೆ ಮೇಲೆ ಹತ್ತಿ ಕೂರ್ತಾರೆ. ಇನ್ನು ಕೆಲವರು ಮರ ಹತ್ತಿಕೊಂಡ್ರೆ, ಬೋಟ್ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದವರ ಉದಾಹರಣೆಯೂ ಇದೆ.
ವ್ಯಾಕ್ಸಿನ್‌ಗೆ ಈ ರೀತಿ ಹೆದರಿದ್ರೆ ಬ್ಲಡ್ ಟೆಸ್ಟ್ ಅಂದಾಗ ಇದರ ದುಪ್ಪಟ್ಟು ಸಮಯ ಹಿಡಿಯುತ್ತೆ. ಪ್ರಯೋಗಾಲಯದ ಸಿಬ್ಬಂದಿ ಎರಡು ಬಾರಿ ರಕ್ತದ ಮಾದರಿ ಪಡೆಯುವಷ್ಟರಲ್ಲಿ ಎಷ್ಟೋ ಮಂದಿ ಕೂಗಿ, ಅತ್ತು ರಂಪಾಟ ಮಾಡಿಬಿಡ್ತಾರೆ. ಕೆಲವರು ರಕ್ತ ನೋಡಿದ ತಕ್ಷಣ ಪ್ರಜ್ಞೆ ತಪ್ಪಿ ಬೀಳ್ತಾರೆ.
ಪೊಲೀಸ್ ಸಿಬ್ಬಂದಿ ಕೂಡ ಇದೇ ರೀತಿ ಬ್ಲಡ್ ಟೆಸ್ಟ್‌ಗೆ ಹೆದರಿ ಮಕ್ಕಳಂತೆ ಹಠ ಮಾಡ್ತಿರೋ ವಿಡಿಯೋ ಇಂಟರ್ನೆಟ್‌ನಲ್ಲಿ ಹರಿದಾಡ್ತಾ ಇದೆ. ಉತ್ತರ ಪ್ರದೇಶದ ಉನ್ನಾವ್‌ನಲ್ಲಿರೋ ಪೊಲೀಸ್ ತರಬೇತಿ ಕೇಂದ್ರದಲ್ಲಿ ಸೆರೆಹಿಡಿದಿರುವ ವಿಡಿಯೋ ಇದು.
ಮೆಡಿಕಲ್ ಟೆಸ್ಟ್‌ಗಾಗಿ ಪೊಲೀಸ್ ಸಿಬ್ಬಂದಿಯ ರಕ್ತದ ಮಾದರಿ ಪಡೆಯಲಾಗಿದೆ. ಪ್ರಯೋಗಾಲಯ ಸಿಬ್ಬಂದಿ ಸಿರಿಂಜ್ ಹಿಡಿದು ಹತ್ತಿರ ಬರ್ತಿದ್ದಂತೆ ಪೊಲೀಸಪ್ಪ ಹೆದರಿ ಕಂಗಾಲಾಗಿದ್ದಾನೆ. ದಯವಿಟ್ಟು ಬೇಡವೆಂದು ಕೈಮುಗಿದು ಚೀರಾಡಲಾರಂಭಿಸಿದ್ದಾನೆ. ಕೊನೆಗೆ ಮತ್ತೋರ್ವ ಪೊಲೀಸ್ ಆತನನ್ನು ಗಟ್ಟಿಯಾಗಿ ಹಿಡಿದುಕೊಂಡು ಧೈರ್ಯ ತುಂಬಬೇಕಾಯ್ತು.
ರಕ್ತ ಪಡೆಯಲು ಸೂಜಿ ಚುಚ್ಚುತ್ತಿದ್ದಂತೆ ಅಳಲು ಪ್ರಾರಂಭಿಸಿದ ಪೊಲೀಸ್ ಪೇದೆ, ಚಿತ್ರ ವಿಚಿತ್ರ ಶಬ್ಧಗಳನ್ನು ಹೊರಡಿಸಿದ್ದಾನೆ. ಈ ಘಟನೆ ಆತನ ಸಹೋದ್ಯೋಗಿಗಳಿಗೆ ತಮಾಷೆ ಎನಿಸಿದೆ. ಅವರೇ ಆತನನ್ನು ಸಮಾಧಾನ ಮಾಡಿ ಕಣ್ಣೀರು ಒರೆಸಿರುವ ದೃಶ್ಯ ಸಹ ಸೆರೆಯಾಗಿದೆ.
https://www.instagram.com/reel/Cf6Ddu2F9XA/?utm_source=ig_embed&ig_rid=34048533-49fc-4f8d-900f-57c21a4752ec