ಇತ್ತೀಚೆಗಷ್ಟೆ ಮುಸಲ್ಮಾನರು ಬಕ್ರೀದ್ ಹಬ್ಬವನ್ನು ಆಚರಿಸಿದ್ದಾರೆ. ಬಕ್ರೀದ್‌ನಲ್ಲಿ ಮೇಕೆಗಳನ್ನು ಬಲಿ ಕೊಡುವುದು ವಾಡಿಕೆ. ಅವುಗಳನ್ನು ಮಾಂಸಕ್ಕಾಗಿ ಕೊಲ್ಲಲಾಗುತ್ತದೆ. ಇದಕ್ಕೆ ಮುಸ್ಲಿಂ ಸಮುದಾಯದಲ್ಲಿ ಕೆಲವೊಂದು ನಂಬಿಕೆಗಳ ಹಿನ್ನೆಲೆಯೂ ಇದೆ.
ಈದ್ ಅಲ್-ಅದಾದಂದು ವಿಧೇಯತೆಯನ್ನು ಸಲ್ಲಿಸುವ ನಿಟ್ಟಿನಲ್ಲಿ ಉಧಿಯಾ (ಅಥವಾ ಕುರ್ಬಾನಿ) ಎಂಬ ಈ ಆಚರಣೆಯನ್ನು ಮಾಡಲಾಗುತ್ತದೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೃದಯಸ್ಪರ್ಷಿಯಾಗಿರೋ ವಿಡಿಯೋ ಒಂದು ವೈರಲ್ ಆಗಿದೆ. ಮೇಕೆಯನ್ನು ಅದರ ಮಾಲೀಕ ಕಟುಕನಿಗೆ ಮಾರಾಟ ಮಾಡಲು ಮುಂದಾಗಿದ್ದಾನೆ. ಇದನ್ನು ಅರಿತ ಮೇಕೆ ಮಾಲೀಕರ ತೋಳುಗಳಲ್ಲಿ ಮುಖವಿಟ್ಟು ಅಳುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಮಾಲೀಕ ತನ್ನ ಮೇಕೆಯನ್ನು ತಬ್ಬಿಕೊಂಡು ಸಮಾಧಾನಪಡಿಸಿದ್ದಾನೆ. ಅಳುತ್ತಿರುವ ಪ್ರಾಣಿಯನ್ನು ಸಮಾಧಾನಪಡಿಸಲು ಮೇಕೆಯ ಮುಖವನ್ನು ಪ್ರೀತಿಯಿಂದ ತಟ್ಟಿದ್ದಾನೆ. ನಂತರ ಕಟುಕನೊಂದಿಗೆ ಡೀಲ್ ಫೈನಲ್ ಮಾಡಿಕೊಂಡು ಮೇಕೆಯನ್ನು ಕಟುಕನ ಕೈಗೆ ಒಪ್ಪಿಸಿದ್ದಾನೆ. ಈ ವಿಡಿಯೋ ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. ಮೇಕೆ ಮಾಲೀಕನ ಮೇಲಿಟ್ಟಿರುವ ಪ್ರೀತಿ ಮತ್ತು ತನಗೆ ಸದ್ಯದಲ್ಲೇ ಸಾವು ಬರಲಿದೆ ಅನ್ನೋದನ್ನು ಅರ್ಥ ಮಾಡಿಕೊಂಡಿರೋ ಆ ಮೂಕ ಪ್ರಾಣಿಯ ನೋವು ನಿಜಕ್ಕೂ ಮನಕಲಕುವಂತಿದೆ.
https://youtu.be/emkSLTC6Ry8