ನವದೆಹಲಿ: ಈ ಬಾರಿ ಈರುಳ್ಳಿ ದರ ಕಣ್ಣೀರು ತರಿಸುವುದಿಲ್ಲ. ಹಬ್ಬದ ಸಂದರ್ಭದಲ್ಲಿ ಮತ್ತು ತೀವ್ರ ಮಳೆಯಾಗಿ ಬೆಳೆ ಹಾನಿಗೊಳಗಾಗುವ ಕಾರಣ ಈರುಳ್ಳಿ ಬೆಲೆ ಗಗನಕ್ಕೇರುತ್ತಿತ್ತು. ಇದರಿಂದ ಗ್ರಾಹಕರ ಕಣ್ಣಲ್ಲಿ ನೀರು ಬರುತ್ತಿತ್ತು. ಈ ವರ್ಷ ಗ್ರಾಹಕರನ್ನು ಇಂತಹ ಸಂಕಷ್ಟದಿಂದ ಪಾರು ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ.
2.5 ಲಕ್ಷ ಟನ್ ಈರುಳ್ಳಿ ಸಂಗ್ರಹಿಸಲಾಗಿದೆ. ಈರುಳ್ಳಿಯ ಸಮರ್ಪಕ ಪೂರೈಕೆ ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರ 2022 -23ನೇ ಆರ್ಥಿಕ ವರ್ಷದಲ್ಲಿ 2.5 ಲಕ್ಷ ಪ್ರಮಾಣದ ಈರುಳ್ಳಿ ಸಂಗ್ರಹಿಸಿದೆ. ಇದುವರೆಗೆ ಸರ್ಕಾರ ಸಂಗ್ರಹಿಸಿದ ದಾಖಲೆಯ ಗರಿಷ್ಠ ಪ್ರಮಾಣ ಇದಾಗಿದೆ. ಆಗಸ್ಟ್ ನಿಂದ ಡಿಸೆಂಬರ್ ವರೆಗೆ ಮಾರುಕಟ್ಟೆಯಲ್ಲಿ ಈರುಳ್ಳಿ ಅಭಾವ ಸೃಷ್ಟಿಯಾಗಿ ದರ ಏರಿಕೆಯಾಗುತ್ತದೆ. ಈ ಬಾರಿ ಸರ್ಕಾರ ಬೆಲೆ ಏರಿಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.