alex Certify ವರದಕ್ಷಿಣೆ ಕಿರುಕುಳಕ್ಕೆ ತಾಯಿ, ಮಗು ಬಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರದಕ್ಷಿಣೆ ಕಿರುಕುಳಕ್ಕೆ ತಾಯಿ, ಮಗು ಬಲಿ

ಶಿವಮೊಗ್ಗ: ವರದಕ್ಷಿಣೆ ಕಿರುಕುಳದಿಂದ ಮನನೊಂದು ಮಹಿಳೆ ಮಗುವಿನೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೊರಬ ತಾಲೂಕಿನ ಕಪ್ಪಗಳಲೆ ಗ್ರಾಮದಲ್ಲಿ ನಡೆದಿದೆ.

ನಯನಾ(27) ಮತ್ತು ಮಗು ಗುರುರಾಜ್(4) ಮೃತಪಟ್ಟವರು. ಸೊರಬ ತಾಲೂಕಿನ ಕುಂಬತ್ತಿ ಗ್ರಾಮದ ನಯನಾ ಮತ್ತು ಕಪ್ಪಗಳಲೆ ಗ್ರಾಮದ ಶರತ್ ಐದು ವರ್ಷದ ಹಿಂದೆ ಮದುವೆಯಾಗಿದ್ದು, ಗಂಡನ ಮನೆಯಲ್ಲಿ ಗಂಡ, ಅತ್ತೆ, ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿರುವ ಬಗ್ಗೆ ತವರು ಮನೆಯಲ್ಲಿ ನಯನಾ ಹೇಳಿಕೊಂಡಿದ್ದರು.

ಹಲವು ಬಾರಿ ಬುದ್ಧಿವಾದ ಹೇಳಿದ್ದರೂ, ಗಂಡನ ಮನೆಯವರ ಕಿರುಕುಳ ಮುಂದುವರೆದಿದ್ದರಿಂದ ಮನನೊಂದು ಮಗನೊಂದಿಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಯನಾ ತಂದೆ ನಾಗರಾಜಪ್ಪ ದೂರು ನೀಡಿದ್ದಾರೆ. ಸೊರಬ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...