alex Certify ವಾರದಲ್ಲಿ 4 ದಿನ ಕೆಲಸ; ಪಿಎಫ್, ಗ್ರಾಚ್ಯುಟಿ ಹೆಚ್ಚಳ; ಸ್ಯಾಲರಿ, ಗಳಿಕೆ ರಜೆ ಬದಲಾವಣೆಯ ಹೊಸ ಕಾರ್ಮಿಕ ಸಂಹಿತೆ ಬಗ್ಗೆ ಇಲ್ಲಿದೆ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾರದಲ್ಲಿ 4 ದಿನ ಕೆಲಸ; ಪಿಎಫ್, ಗ್ರಾಚ್ಯುಟಿ ಹೆಚ್ಚಳ; ಸ್ಯಾಲರಿ, ಗಳಿಕೆ ರಜೆ ಬದಲಾವಣೆಯ ಹೊಸ ಕಾರ್ಮಿಕ ಸಂಹಿತೆ ಬಗ್ಗೆ ಇಲ್ಲಿದೆ ಮಾಹಿತಿ

ಕಾರ್ಮಿಕರ ಸಂಬಳ, ಪಿಎಫ್​ ಮತ್ತು ಕೆಲಸದ ಸಮಯದ ಹೊಸ ನಿಯಮ ಶೀಘ್ರದಲ್ಲೇ ಜಾರಿಯಾಗುತ್ತಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಕಾರ್ಮಿಕ ಸಚಿವ ಭೂಪೇಂದರ್​ ಯಾದವ್​, ಬಹುತೇಕ ಎಲ್ಲಾ ರಾಜ್ಯಗಳು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳ ಕರಡು ನಿಯಮಗಳನ್ನು ಸಿದ್ಧಪಡಿಸಿದ್ದು, ಸೂಕ್ತ ಸಮಯದಲ್ಲಿ ಹೊಸ ನಿಯಮಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.

ಕೆಲವು ರಾಜ್ಯಗಳು ಇನ್ನೂ ಕರಡು ನಿಯಮಗಳನ್ನು ದೃಢೀಕರಿಸುವ ಪ್ರಕ್ರಿಯೆಯಲ್ಲಿವೆ. ರಾಜಸ್ಥಾನವು ಎರಡು ಕೋಡ್​ಗಳ ಕರಡು ನಿಯಮಗಳನ್ನು ದೃಢಪಡಿಸಿದೆ ಮತ್ತು ಎರಡು ಉಳಿದಿದೆ, ಆದರೆ ಪಶ್ಚಿಮ ಬಂಗಾಳವು ಅವುಗಳನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿದೆ. ಮೇಘಾಲಯ ಸೇರಿದಂತೆ ಕೆಲವು ಈಶಾನ್ಯ ರಾಜ್ಯಗಳು ನಾಲ್ಕು ಕೋಡ್​ಗಳ ಕರಡು ನಿಯಮಗಳನ್ನು ರಚಿಸುವ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರವು ಈಗಾಗಲೇ ಎಲ್ಲಾ ನಾಲ್ಕು ಕೋಡ್​ ಗಳ ಕರಡು ನಿಯಮಗಳನ್ನು ಮೊದಲೇ ಪ್ರಕಟಿಸಿದೆ. ಕಾರ್ಮಿಕರ ವಿಷಯ ರಾಜ್ಯದ ತೀರ್ಮಾನಕ್ಕೆ ಬಿಟ್ಟ ವಿಷಯವಾಗಿರುವುದರಿಂದ ರಾಜ್ಯಗಳು ತಮ್ಮ ಭಾಗದಲ್ಲಿ ನಿಯಮಗಳನ್ನು ರೂಪಿಸುವ ಅಗತ್ಯವಿದೆ.

29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಒಟ್ಟುಗೂಡಿಸಲಾಗಿದೆ. ವೇತನ, ಆರೋಗ್ಯ ಮತ್ತು ಕೈಗಾರಿಕಾ ಸಂಬಂಧಗಳ ಮೇಲೆ ನಾಲ್ಕು ಕಾರ್ಮಿಕ ಕೋಡ್​ಗಳಾಗಿ ಸರಳೀಕರಿಸಲಾಗಿದೆ. ಆದರೆ ಅವುಗಳಲ್ಲಿ ಯಾವುದನ್ನೂ ಇದುವರೆಗೆ ಬಹಿರಂಗಪಡಿಸಿಲ್ಲ.

ನಾಲ್ಕು ಕಾರ್ಮಿಕ ಕೋಡ್​ ಗಳು:
1. ವೇತನದ ಸಂಹಿತೆ, 2019
2. ಕೈಗಾರಿಕಾ ಸಂಬಂಧಗಳ ಕೋಡ್​, 2020
3. ಸಾಮಾಜಿಕ ಭದ್ರತೆಯ ಸಂಹಿತೆ, 2020
4. ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಕೋಡ್​, 2020

ಹೊಸ ಕಾರ್ಮಿಕ ಸಂಹಿತೆಗಳ ಅನುಷ್ಠಾನದ ನಂತರ ಕೆಲವು ಬದಲಾವಣೆಗಳು ಆಗಬಹುದು. ವೇತನದ ವ್ಯಾಖ್ಯಾನದಲ್ಲಿನ ಬದಲಾವಣೆಯು ಟೇಕ್​-ಹೋಮ್​ ಮೊತ್ತದ ಮೇಲೆ ಪರಿಣಾಮ ಬೀರಬಹುದು ಆದರೆ ನಿವೃತ್ತಿ ಉಳಿತಾಯವನ್ನು ಹೆಚ್ಚಿಸುತ್ತದೆ.
ಕಡಿಮೆ ಸಂಬಳ, ಪಿಎಫ್​ ಮತ್ತು ಗ್ರಾಚ್ಯುಟಿ ಹೆಚ್ಚಳ, 12 ಗಂಟೆಗಳ ಕೆಲಸದ ವಾರ, ಗಳಿಕೆ ರಜೆ ನೀತಿಯಲ್ಲಿ ಮಾರ್ಪಾಡು ಆಗಬಹುದೆಂದು ನಿರೀಕ್ಷಿಸಲಾಗಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...