alex Certify BIG NEWS: 14,850 ಕೋಟಿ ರೂ. ವೆಚ್ಚದ ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​​ ವೇ ಉದ್ಘಾಟನೆ ಮಾಡಿದ ಪ್ರಧಾನಿ; 28 ತಿಂಗಳೊಳಗೆ ಕಂಪ್ಲೀಟ್ ಆದ ಪ್ರಾಜೆಕ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 14,850 ಕೋಟಿ ರೂ. ವೆಚ್ಚದ ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​​ ವೇ ಉದ್ಘಾಟನೆ ಮಾಡಿದ ಪ್ರಧಾನಿ; 28 ತಿಂಗಳೊಳಗೆ ಕಂಪ್ಲೀಟ್ ಆದ ಪ್ರಾಜೆಕ್ಟ್

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದು, ಜಲೌನ್ ಜಿಲ್ಲೆಯ ಒರೈ ತೆಹಸಿಲ್​ನ ಕೈಥೇರಿ ಗ್ರಾಮದಲ್ಲಿ ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​​ ವೇಯನ್ನು ಉದ್ಘಾಟಿಸಿದರು. ಇದು ಸುಮಾರು 14,850 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ 296 ಕಿಮೀ ಉದ್ದದ ನಾಲ್ಕು ಪಥದ ಎಕ್ಸ್​ಪ್ರೆಸ್​​ ವೇ ಆಗಿದೆ. ಪ್ರಧಾನಿ ಕಾರ್ಯಾಲಯದ ಪ್ರಕಾರ, ಎಕ್ಸ್​ಪ್ರೆಸ್​​ ವೇ ಕಾಮಗಾರಿಯನ್ನು 28 ತಿಂಗಳೊಳಗೆ ಪೂರ್ಣಗೊಳಿಸಿರುವ ಹೆಗ್ಗಳಿಕೆ ಈ ಪ್ರಾಜೆಕ್ಟ್​​ಗೆ ಸಲ್ಲುತ್ತೆ.

ಇಂದು ಬೆಳಿಗ್ಗೆ 11:30 ರ ಸುಮಾರಿಗೆ ಪ್ರಧಾನಿ ಮೋದಿ ಬುಂದೇಲ್​ಖಂಡ್​​​ ಎಕ್ಸ್​ಪ್ರೆಸ್​​ ವೇಯನ್ನು ಉದ್ಘಾಟಿಸಿದರು. ಫೆಬ್ರವರಿ 29, 2020 ರಂದು ಪ್ರಧಾನಿ ಮೋದಿ ಬುಂದೇಲ್​​ಖಂಡ್​ ಎಕ್ಸ್​ಪ್ರೆಸ್​​ ವೇ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಈಗ ಅದೇ ಯೋಜನೆಯನ್ನ ಉದ್ಘಾಟನೆ ಮಾಡಲಾಗಿದೆ.

2013-14 ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸುಮಾರು 30 ಸಾವಿರ ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಈ ಬಾರಿ ಈ ಇಲಾಖೆಗೆ ನೀಡಲಾಗಿರುವ ಬಜೆಟ್ ಅನ್ನು ಗಮನಿಸಿದರೆ, ಇದರಲ್ಲಿ ಶೇ.550ರಷ್ಟು ಹೆಚ್ಚಳವಾಗಿದೆ. ಇನ್ನು ಕಳೆದ ಏಳು ವರ್ಷಗಳಲ್ಲಿ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಉದ್ದ ಶೇ.50ಕ್ಕಿಂತ ಹೆಚ್ಚಿದೆ. ಇದರ ಉದ್ದವು ಏಪ್ರಿಲ್ 2014 ರ ಹೊತ್ತಿಗೆ 91,287 ಕಿಮೀ ಆಗಿತ್ತು, ಇದು 31 ಡಿಸೆಂಬರ್ 2021 ರ ವೇಳೆಗೆ ಸುಮಾರು 1,41,000 ಕಿಮೀಗೆ ಏರಿದೆ.

296 ಕಿಮೀ ಉದ್ದದ ಬುಂದೇಲ್​​ಖಂಡ್​​ ಎಕ್ಸ್​ಪ್ರೆಸ್​​ ವೇ ಏಳು ಜಿಲ್ಲೆಗಳ ಮೂಲಕ ಹಾದು ಹೋಗುವುದರಿಂದ ಏಳು ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ. ಇದು ಚಿತ್ರಕೂಟ್ ಜಿಲ್ಲೆಯ ಭರತ್ಕಪ್ ಬಳಿಯ ಗೊಂಡಾ ಹಳ್ಳಿಯಲ್ಲಿ NH-35 ನಿಂದ ಇಟಾವಾ ಜಿಲ್ಲೆಯ ಕುದುರೆಲ್ ಗ್ರಾಮದವರೆಗೆ ವಿಸ್ತರಿಸುತ್ತದೆ. ಅಲ್ಲಿ ಇದು ಆಗ್ರಾ-ಲಕ್ನೋ ಎಕ್ಸ್​ಪ್ರೆಸ್​​ ವೇಯೊಂದಿಗೆ ಸಂಧಿಸುತ್ತದೆ. ಇದು ಚಿತ್ರಕೂಟ, ಬಂದಾ, ಮಹೋಬಾ, ಹಮೀರ್ಪುರ, ಜಲೌನ್, ಔರೈಯಾ ಮತ್ತು ಇಟಾವಾ ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ.

ಬುಂದೇಲ್ಖಂಡ್ ಎಕ್ಸ್​ಪ್ರೆಸ್​​ ವೇ ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಪಿಎಂಒ ಹೇಳಿದೆ. PMO ಪ್ರಕಾರ, ಎಕ್ಸ್​ಪ್ರೆಸ್​​ ವೇ ಪಕ್ಕದಲ್ಲಿರುವ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್​​ಗಳನ್ನು ಮಾಡುವ ಕೆಲಸ ಪ್ರಾರಂಭವಾಗಿದೆ.

ಎಕ್ಸ್​ಪ್ರೆಸ್​​ ವೇನ ವಿಸ್ತರಣೆಯು ಚಿತ್ರಕೂಟ್ ಜಿಲ್ಲೆಯ ಭರತ್ಕುಪ್ ಬಳಿಯ ಗೊಂಡಾ ಗ್ರಾಮದ NH-35 ನಿಂದ ಇಟಾವಾ ಜಿಲ್ಲೆಯ ಕುದ್ರೈಲ್ ಗ್ರಾಮಕ್ಕೆ ವಿಸ್ತರಣೆಯಾಗಿದೆ. ಇಲ್ಲಿ ಇದು ಆಗ್ರಾ-ಲಖನೌ ಎಕ್ಸ್​ಪ್ರೆಸ್​​ ವೇಯನ್ನು ಸಂಧಿಸುತ್ತದೆ. ಈ ಪ್ರದೇಶದಲ್ಲಿ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ, ಬುಂದೇಲ್​ಖಂಡ್​ ಎಕ್ಸ್​ಪ್ರೆಸ್​​ ವೇ ಆರ್ಥಿಕ ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಸ್ಥಳೀಯರಿಗೆ ಸಾವಿರಾರು ಉದ್ಯೋಗಗಳು ಇಲ್ಲಿ ಸೃಷ್ಟಿಯಾಗಲಿವೆ. ಎಕ್ಸ್​ಪ್ರೆಸ್​​ ವೇ ಪಕ್ಕದಲ್ಲಿ ಬಂದಾ ಮತ್ತು ಜಲೌನ್ ಜಿಲ್ಲೆಗಳಲ್ಲಿ ಕೈಗಾರಿಕಾ ಕಾರಿಡಾರ್​ಗಳನ್ನು ನಿರ್ಮಿಸುವ ಕೆಲಸ ಈಗಾಗಲೇ ಪ್ರಾರಂಭವಾಗಿದೆ.

ಎಕ್ಸ್​ಪ್ರೆಸ್​​ ವೇ ಚಿತ್ರಕೂಟ, ಬಂದಾ, ಮಹೋಬಾ, ಹಮೀರ್​​ಪುರ್​, ಜಲೌನ್, ಔರೈಯಾ ಮತ್ತು ಇಟಾವಾ ಎಂಬ ಏಳು ಜಿಲ್ಲೆಗಳ ಮೂಲಕ ಹಾದುಹೋಗುತ್ತದೆ. ಇದು ಉತ್ತರ ಪ್ರದೇಶದ 6ನೇ ಎಕ್ಸ್​ಪ್ರೆಸ್​​ ವೇ ಆಗಿದೆ. ಅದರೊಂದಿಗೆ ಇನ್ನೂ ಏಳು ಎಕ್ಸ್​ಪ್ರೆಸ್​​ ವೇಗಳು ನಿರ್ಮಾಣ ಹಂತದಲ್ಲಿದೆ.

Image
Image
Image

 

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...