ರಾಯಚೂರು: ಪ್ರವಾಹದ ಭೀತಿಯ ನಡುವೆ ಜನರಿಗೆ ಮೊಸಳೆಗಳ ಆತಂಕ ಎದುರಾಗಿದೆ. ಪ್ರಾಣಿಗಳು ಮತ್ತು ಮನುಷ್ಯರ ಬಲಿಗಾಗಿ ಮೊಸಳೆಗಳು ಕಾದು ಕುಳಿತ ಘಟನೆ ರಾಯಚೂರಿನ ಕೃಷ್ಣಾ ನದಿ ತೀರದಲ್ಲಿ ಕಂಡುಬಂದಿದೆ.
ಸೇತುವೆಯ ಮೇಲೆ ಮೊಸಳೆಗಳು ಗುಂಪು ಗುಂಪಾಗಿ ಕುಳಿತುಕೊಂಡಿವೆ. ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಮೊಸಳೆಗಳು ಪ್ರತ್ಯಕ್ಷವಾಗಿವೆ. ಗುರಜಾಪುರ, ಕಾಡ್ಲೂರು ಕರೆಕಲ್, ಅರಸಣಗಿ ಜನ ಮೊಸಳೆ ಕಂಡು ಕಂಗಾಲಾಗಿದ್ದಾರೆ. ಗುರಜಾಪುರ ಬ್ಯಾರೇಜ್ ಕಂ ಬ್ರಿಡ್ಜ್ ಮೇಲೆ ಮೊಸಳೆಗಳು ಕುಳಿತುಕೊಂಡಿದ್ದು, ನಡೆದುಕೊಂಡು ಹೋಗುವಾಗ ದಾಳಿ ಮಾಡುವ ಆತಂಕ ಎದುರಾಗಿದೆ. ಈ ಹಿಂದೆಯೂ ಹಲವರ ಮೇಲೆ ಮೊಸಳೆಗಳು ದಾಳಿ ಮಾಡಿದ್ದವು.
ಪ್ರವಾಹ ಹಿನ್ನೆಲೆಯಲ್ಲಿ ಹೊಲಗದ್ದೆಗಳಿಗೂ ಮೊಸಳೆಗಳು ಎಂಟ್ರಿ ಕೊಟ್ಟಿವೆ. ಬಲಿಗಾಗಿ ಮೊಸಳೆಗಳು ಕಾದು ಕುಳಿತುಕೊಂಡಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.