
ಬೆಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ವೆಬ್ಸೈಟ್ ನಲ್ಲಿ ಕನ್ನಡ ಅಳವಡಿಸಲಾಗಿದೆ. ಈ ಮೊದಲು ಕನ್ನಡ ಕಡೆಗಣಿಸಲಾಗಿತ್ತು. ಇದರ ಬಗ್ಗೆ ಕನ್ನಡ ಪರ ಸಂಘಟನೆಗಳು, ರೈತರಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
ರಾಜ್ಯದಲ್ಲಿ 50 ಲಕ್ಷಕ್ಕೂ ಅಧಿಕ ಫಲಾನುಭವಿಗಳಿದ್ದರೂ, ಕಿಸಾನ್ ಸನ್ಮಾನ್ಯ ಯೋಜನೆಯ ಮಾಹಿತಿ ಕನ್ನಡದಲ್ಲಿ ಇರಲಿಲ್ಲ. 30 ಲಕ್ಷ ಫಲಾನುಭವಿಗಳು ಇರುವ ಮಲಯಾಳಂ ಮತ್ತು ಅಸ್ಸಾಮಿ ಭಾಷೆಗಳಲ್ಲಿ ಕಿಸಾನ್ ಸಮ್ಮಾನ್ ಮಾಹಿತಿ ನೀಡಲಾಗಿದ್ದು, ಕನ್ನಡ ಕಡೆಗಣಿಸಲಾಗಿತ್ತು. ಇದರ ವಿರುದ್ಧ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿತ್ತು.
ಈಗ ರಾಜ್ಯದ ರೈತರಿಗೂ ಅನುಕೂಲವಾಗುವಂತೆ ಪಿಎಂ ಕಿಸಾನ್ ವೆಬ್ ಸೈಟ್ ನಲ್ಲಿ ಕನ್ನಡ ಅಳವಡಿಸಲಾಗಿದೆ. ಈ ಯೋಜನೆಯಡಿ ರೈತರಿಗೆ ತಲಾ ಮೂರು ಕಂತುಗಳಲ್ಲಿ ವಾರ್ಷಿಕ 6,000 ರೂ. ಜಮಾ ಮಾಡಲಾಗುವುದು.