
ಬೆಂಗಳೂರು: ಮನೆ, ಕಟ್ಟಡ ನಿರ್ಮಿಸುವವರು ಕಟ್ಟಡ ನಿರ್ಮಾಣ ಲೈಸೆನ್ಸ್ ಸಿಗದೇ ಪರದಾಡುವಂತಾಗಿದೆ. ಜುಲೈ 7 ರಿಂದಲೇ ನಿರ್ಮಾಣ -2 ತಂತ್ರಾಂಶ ಸ್ಥಗಿತವಾಗಿದ್ದು, ಸಾಫ್ಟ್ವೇರ್ ಬಿಟ್ಟು ಕಚೇರಿಯಲ್ಲಿಯೇ ಅರ್ಜಿ ಸ್ವೀಕರಿಸಿ ವಿಲೇವಾರಿ ಮಾಡಲು ಸೂಚಿಸಲಾಗಿದೆ.
ಮನೆ ಹಾಗೂ ಕಟ್ಟಡ ನಿರ್ಮಿಸುವವರು ಲೈಸೆನ್ಸ್ ಪಡೆದುಕೊಳ್ಳಬೇಕಿದೆ. ಇದಕ್ಕಾಗಿ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಕಟ್ಟಡ ಪರವಾನಿಗೆ ಅರ್ಜಿ ನಿರ್ವಹಣೆಗೆ ನಿರ್ಮಾಣ -2 ತಂತ್ರಾಂಶ ಅನುಷ್ಠಾನಗೊಳಿಸಲಾಗಿದೆ. ಆದರೆ, ಜುಲೈ 7 ರಿಂದಲೇ ತಾಂತ್ರಿಕ ಸಮಸ್ಯೆಗಳಿಂದ ತಂತ್ರಾಂಶ ಸ್ಥಗಿತವಾಗಿದ್ದು, ಲೈಸೆನ್ಸ್ ಸಿಗದೇ ಪರದಾಡುವಂತಾಗಿದೆ.
ಕಟ್ಟಡ ನಿರ್ಮಾಣಕ್ಕೆ ಅರ್ಜಿ ಸಲ್ಲಿಸಿ ಕಾಯುತ್ತಿದ್ದವರಿಗೆ ತೊಂದರೆಯಾಗಿದ್ದು, ಮತ್ತೊಮ್ಮೆ ಅರ್ಜಿ ಸಲ್ಲಿಸುವಂತಾಗಿದೆ. ತಂತ್ರಾಂಶ ಸ್ಥಗಿತಗೊಂಡಿರುವುದರಿಂದ ಅರ್ಜಿಗಳನ್ನು ಕಡತಗಳಲ್ಲಿ ನಿರ್ವಹಿಸಿ ಕಟ್ಟಡ ಪರವಾನಿಗೆ ನೀಡಲು ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ಆಯುಕ್ತರು, ಪೌರಾಯುಕ್ತರು, ಮುಖ್ಯ ಅಧಿಕಾರಿಗಳಿಗೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರು ಸೂಚನೆ ನೀಡಿದ್ದಾರೆ.