ಬ್ಯಾಕ್ಫ್ಲಿಪ್ ಹೊಡೆಯುವುದು ಒಂದು ಕಲೆ. ಅದು ಜಿಮ್ಯಾಸ್ಟಿಕ್ನ ಅದ್ಭುತ ಕೌಶಲ್ಯ. ಬಾಡಿಯನ್ನ ಗಾಳಿಯಲ್ಲಿ ತೇಲಿಸ್ತಾ ಹಿಮ್ಮುಖವಾಗಿ ನಿಲ್ಲುವುದು. ನೋಡೋದಕ್ಕೆ ತುಂಬಾ ಈಸಿ ಆದರೆ ಹಾಗೆ ನಿಲ್ಲುವುದು ತುಂಬಾ ಕಷ್ಟ. ಒಂದೇ ಒಂದು ಕ್ಷಣದ ಲೆಕ್ಕಾಚಾರ ತಪ್ಪಾದ್ರೆ ಅಲ್ಲಿ ಆಗುವ ಅವಘಡವೇ ಬೇರೆ.
ಈ ವಿಡಿಯೋದಲ್ಲೂ ಕೂಡಾ ಅಂತಹದ್ದೇ ಒಂದು ದೃಶ್ಯವನ್ನ ನೋಡಬಹುದಾಗಿದೆ. ಇಲ್ಲಿ ಒಬ್ಬ ಬಾಲಕ ಈಜುಕೊಳದ ಪಕ್ಕದಲ್ಲಿ ನಿಂತು ಬ್ಯಾಕ್ಫ್ಲಿಪ್ ಹೊಡೆಯುವುದಕ್ಕೆ ನೋಡುತ್ತಾನೆ. ಬ್ಯಾಲೆನ್ಸ್ ತಪ್ಪಿ ಕೊನೆಗೆ ಜಾರಿ ಮಕಾಡೆ ಬಿದ್ದು ಬಿಡ್ತಾನೆ.
ಈ ವಿಡಿಯೊ ಐಪಿಎಸ್ ಅಧಿಕಾರಿ ದೀಪಾಂಶು ಕಾಬ್ರಾ ಅವರು ಹಂಚಿಕೊಂಡಿದ್ಧಾರೆ. “ಜೀವನದಲ್ಲಿ ರಿಸ್ಕ್ ತೆಗೆದುಕೊಳ್ಳಬೇಕು. ಆದರೆ ಕೆಲವೊಮ್ಮೆ ಆ ರಿಸ್ಕ್ ತೆಗೆದುಕೊಳ್ಳುವ ಮುಂಚೆ ಹಿಂದೆ ಮುಂದೆ ಯೋಚನೆ ಮಾಡಿ ರಿಸ್ಕ್ ತೆಗೆದುಕೊಳ್ಳಬೇಕು“ ಅನ್ನೋ ಅರ್ಥದಲ್ಲಿ ಕ್ಯಾಪ್ಷನ್ನಲ್ಲಿ ಬರೆದುಕೊಂಡಿದ್ದಾರೆ.
ಜೀವನದಲ್ಲಿ ಸವಾಲುಗಳು ಒಂದೊಂದಾಗಿ ಎದುರಾಗ್ತಾ ಇರುತ್ತೆ. ಆ ಸವಾಲುಗಳನ್ನ ಎದುರಿಸಬೇಕು ಅಂದರೆ ಕೆಲವೊಮ್ಮೆ ಅಪಾಯ ಇದ್ದರೂ ಅದನ್ನ ಕಡೆಗಣಿಸಬೇಕು. ಹಾಗಂತ ಸುಮ್ಮಸುಮ್ಮನೆ ಅಪಾಯವನ್ನ ಮೈಮೇಲೆ ಎಳೆದುಕೊಂಡರೆ ಆಗೋ ಎಡವಟ್ಟು ಏನು ಅನ್ನೋದು ಈ ವಿಡಿಯೋ ನೋಡಿ ಅರ್ಥ ಮಾಡಿಕೊಳ್ಳಬೇಕು ಅಂತ ದೀಪಾಂಶು ಕಾಬ್ರಾ ಸಂದೇಶ ಕೊಟ್ಟಿದ್ದಾರೆ.
ಈ ವಿಡಿಯೋವನ್ನ ಈಗಾಗಲೇ 30 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಇನ್ನೂ ರಾಶಿ-ರಾಶಿ ಕಾಮೆಂಟ್ಗಳು ಬಂದಿವೆ. ಕೆಲವರು ತಮಾಷೆಯಾಗಿ ಕಾಮೆಂಟ್ ಹಾಕಿದ್ದಾರೆ ಇನ್ನೂ ಕೆಲವರು ಬಾಲಕನಿಗೆ ಏನಾಯಿತೋ ಏನೋ ಅಂತ ಕಳವಳ ವ್ಯಕ್ತ ಪಡಿಸಿದ್ದಾರೆ.