alex Certify BIG NEWS: ಮಾಸಿಕ GST ಪಾವತಿ ಫಾರ್ಮ್‌ನಲ್ಲಿ ಬದಲಾವಣೆ; ಸೆ.15 ರೊಳಗೆ ಅಭಿಪ್ರಾಯ ಹಂಚಿಕೊಳ್ಳಲು ಉದ್ಯಮ ಕ್ಷೇತ್ರಕ್ಕೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮಾಸಿಕ GST ಪಾವತಿ ಫಾರ್ಮ್‌ನಲ್ಲಿ ಬದಲಾವಣೆ; ಸೆ.15 ರೊಳಗೆ ಅಭಿಪ್ರಾಯ ಹಂಚಿಕೊಳ್ಳಲು ಉದ್ಯಮ ಕ್ಷೇತ್ರಕ್ಕೆ ಸೂಚನೆ

ಮಾಸಿಕ ಜಿ.ಎಸ್‌.ಟಿ. ಪಾವತಿ ನಮೂನೆಯಲ್ಲಿ ಸದ್ಯದಲ್ಲೇ ಬದಲಾವಣೆಯಾಗಲಿದೆ. ಈ ಸಂಬಂಧ ದಾಖಲೆಗಳನ್ನು ಕೇಂದ್ರ ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದೆ. ಹೊಸ ನಮೂನೆಗಳ ಬಗ್ಗೆ ಸೆಪ್ಟೆಂಬರ್ 15ರೊಳಗೆ ಅಭಿಪ್ರಾಯ ತಿಳಿಸುವಂತೆ ಉದ್ಯಮ ಕ್ಷೇತ್ರದವರಿಗೆ ಸೂಚಿಸಿದೆ.

GST ಕೌನ್ಸಿಲ್ ಕಳೆದ ತಿಂಗಳು ತನ್ನ ಸಭೆಯಲ್ಲಿ GSTR-3B ಅಥವಾ ಮಾಸಿಕ ತೆರಿಗೆ ಪಾವತಿ ನಮೂನೆಯಲ್ಲಿ ಬದಲಾವಣೆಗಳನ್ನು ಮಾಡಲು ಸಲಹೆ ನೀಡುವಂತೆ ಕೇಳಿತ್ತು. ಅದರ ಪ್ರಕಾರ ಫಾರ್ಮ್ GSTR-3B ನಲ್ಲಿನ ಸಮಗ್ರ ಬದಲಾವಣೆಗಳ ಕುರಿತು ವಿವರವಾದ ಪರಿಕಲ್ಪನೆಯನ್ನು ಬಿಡುಗಡೆ ಮಾಡಲಾಗಿದೆ.

ಸೆಪ್ಟೆಂಬರ್ 15 ರೊಳಗೆ gstpolicywing-cbic@gov.in ನಲ್ಲಿ ಅಭಿಪ್ರಾಯವನ್ನು ಹಂಚಿಕೊಳ್ಳಬಹುದು. ತೆರಿಗೆದಾರರು ಮತ್ತು ನಿರ್ವಾಹಕರು ಸೇರಿದಂತೆ GSTR 3Bಯಲ್ಲಿನ ಆಟೋ ಪಾಪ್ಯುಲೇಶನ್‌ ಮತ್ತು ಅಮೆಂಡ್‌ಮೆಂಟ್‌ ಕುರಿತಂತೆ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದಾಗಿದೆ.

ಪ್ರಸ್ತಾವಿತ ಬದಲಾವಣೆಗಳು ತೆರಿಗೆದಾರರಿಗೆ ಅನುಕೂಲ ಮಾಡಿಕೊಡುತ್ತವೆ. ತೆರಿಗೆ ನಿರ್ವಾಹಕರಿಗೆ ಆದಾಯ ಸೋರಿಕೆಯನ್ನು ತಡೆಯುತ್ತದೆ ಎಂದು AMRG ಮತ್ತು ಅಸೋಸಿಯೇಟ್ಸ್‌ ನ ಹಿರಿಯ ಪಾಲುದಾರ ರಜತ್ ಮೋಹನ್ ಹೇಳಿದ್ದಾರೆ. ವ್ಯಾಪಾರ ಮತ್ತು ಉದ್ಯಮದ ಬೇಡಿಕೆಯ ಮೇರೆಗೆ ಹೊಸ GSTR-3B ತಿದ್ದುಪಡಿಯನ್ನು ಅನುಮತಿಸುವ ಸಾಧ್ಯತೆ ಇದೆ. ಋಣಾತ್ಮಕ ಮೌಲ್ಯಗಳ ವರದಿ ಮತ್ತು ಅನರ್ಹ ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ವರದಿ ಮಾಡುವ ವಿಧಾನವನ್ನು ಸ್ಪಷ್ಟಪಡಿಸಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...