ವ್ಯಕ್ತಿ ಒಬ್ಬ ತನ್ನ ಪತ್ನಿ ತನಗೆ ನಿಷ್ಠಳಾಗಿಲ್ಲವೆಂಬ ಅನುಮಾನದ ಮೇಲೆ ಆಕೆಯ ತಲೆ ಕತ್ತರಿಸಿ ರುಂಡದೊಂದಿಗೆ ಹನ್ನೆರಡು ಕಿಲೋಮೀಟರ್ ವರೆಗೆ ನಡೆದಿದ್ದಾನೆ. ಈ ಬರ್ಬರ ದೃಶ್ಯವನ್ನು ನೋಡಿದ ಸಾರ್ವಜನಿಕರು ಬೆಚ್ಚಿಬಿದ್ದಿದ್ದಾರೆ.
ಇಂಥದೊಂದು ಆಘಾತಕಾರಿ ಘಟನೆ ಒಡಿಸ್ಸಾದ ಧೇನಕಲ್ ಜಿಲ್ಲೆಯ ಚಂದ್ರಶೇಖರಪುರ ಗ್ರಾಮದಲ್ಲಿ ನಡೆದಿದ್ದು, ಅಲ್ಲಿನ ನಾಕಾಫೋಡಿ ಮಾಂಜಿ ಎಂಬಾತ ಈ ಭೀಕರ ಕೃತ್ಯವೆಸಗಿದ್ದಾನೆ. ತಲೆ ಕತ್ತರಿಸಿದ ಬಳಿಕ ಅದನ್ನು ತೆಗೆದುಕೊಂಡು ರಾಜಾರೋಷವಾಗಿ ಊರೆಲ್ಲಾ ಅಡ್ಡಾಡಿದ್ದಾನೆ.
ದಂಪತಿಗೆ ಇಬ್ಬರು ಪುತ್ರರಿದ್ದರೆನ್ನಲಾಗಿದ್ದು, ಈ ಪೈಕಿ ಒಬ್ಬಾತನಿಗೆ ಮದುವೆಯೂ ಆಗಿದೆ. ಇದೀಗ ಗಂಡಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮಾಂಜಿಯನ್ನು ಬಂಧಿಸಿದ್ದಾರೆ. ಅಲ್ಲದೆ ಕೃತ್ಯಕ್ಕೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ.