ಕಿಕ್ಬಾಕ್ಸಿಂಗ್ ಕ್ಲಾಸ್ನಲ್ಲಿ ಪುಟ್ಟ ಬಾಲಕನ ಮೊಂಡಾಟ: ಇದು ನನ್ನ ಬಾಲ್ಯದ ರೂಪ ಅಂದ ನೆಟ್ಟಿಗರು 15-07-2022 7:13AM IST / No Comments / Posted In: Latest News, Live News, International ಮಕ್ಕಳ ಆಟ, ತುಂಟಾಟ ಎಷ್ಟು ಮುದ್ದು ಮುದ್ದಾಗಿರುತ್ತೆ ಅಂದ್ರೆ, ಅದನ್ನ ನೋಡ್ತಿದ್ರೆನೇ ಪ್ರೀತಿ ಇನ್ನಷ್ಟು ಉಕ್ಕಿ ಬಂದು ಬಿಡುತ್ತೆ. ಆದರೆ ಈಗ ಸೋಶಿಯಲ್ ಮೀಡಿಯಾದಲ್ಲಿ ಒಂದು ಪುಟ್ಟ ಪೋರನ ಮೊಂಡಾಟ ವೈರಲ್ ಆಗ್ತಿದೆ. 7 ಸೆಕೆಂಡಿನ ಈ ವಿಡಿಯೋ ಮನಸ್ಸಿಗೆ ಕಚಗುಳಿ ಕೊಟ್ಟಷ್ಟು ಖುಷಿ ಕೊಡುತ್ತೆ. ಕೆಲವೊಮ್ಮೆ ಮಕ್ಕಳಿಗೆ ಮನಸ್ಸಿಲ್ಲದಿದ್ದರೂ ಪಾಲಕರ ಒತ್ತಾಯಕ್ಕೆ ಎಷ್ಟೋ ಕೆಲಸಗಳು ಮಾಡುತ್ತೆ. ಪಾಲಕರು ಅದು ಮಕ್ಕಳ ಹಿತದೃಷ್ಟಿಯಿಂದ ಹೇಳಿದ್ದರೂ ಕೂಡಾ, ಪುಟ್ಟ ಮಕ್ಕಳಿಗೆ ಅಷ್ಟು ಅರ್ಥ ಆಗುವ ಮನಸ್ಸು ಅವರದ್ದಲ್ಲ. ಆದರೆ ಆ ಸಂದರ್ಭದಲ್ಲಿ ಮಕ್ಕಳು ಎಷ್ಟು ಕಿರಿಕಿರಿ ಅನುಭವಿಸುತ್ತಾರೆ ಅನ್ನೊ ವಿಡಿಯೋ ಇದಾಗಿದೆ. ಈ ವಿಡಿಯೋ ನಿಮಗೆ ನಿಮ್ಮ ಬಾಲ್ಯದ ನೆನಪು ಮಾಡಿಕೊಡೊದಂತೂ ಗ್ಯಾರಂಟಿ. ಅದು ಕಿಕ್ ಬಾಕ್ಸಿಂಗ್ ಕ್ಲಾಸ್. ಅಲ್ಲಿದ್ದ ಮಕ್ಕಳು ಫುಲ್ ಜೋಶ್ನಲ್ಲಿ ಕಿಕ್ ಬ್ಯಾಗ್ಗೆ ಪಂಚ್, ಕಿಕ್ ಮಾಡ್ತಾ ಇದ್ದರು. ಆದರೆ ಅಲ್ಲೇ ಇದ್ದ ಇನ್ನೊಬ್ಬ ಪುಟ್ಟ ಬಾಲಕ ಅಳುಮುಖ ಇಟ್ಟುಕೊಂಡು ಕಿಕ್ ಬ್ಯಾಗ್ಗೆ ಪಂಚ್ ಮಾಡುವ ಸ್ಟೈಲ್ ನೋಡ್ತಿದ್ರೆ ಫನ್ನಿಯಾಗಿತ್ತು. ಅದು ಆತನಿಗೆ ಸುತರಾಂ ಇಷ್ಟ ಅಲ್ಲ ಅನ್ನೊದು ಗೊತ್ತಾಗುತ್ತಿತ್ತು. ಆದರೆ ಅಪ್ಪ-ಅಮ್ಮನ ಒತ್ತಾಯಕ್ಕೆ ಅಲ್ಲಿಗೆ ಬಂದಿದ್ದ ಆತ ಪಂಚ್ ಮಾಡುವುದು ಬಿಟ್ಟು ಸುಮ್ಮನೆ ಕಾಟಾಚಾರಕ್ಕಾಗಿ ಪಂಚ್ ಮಾಡುವ ಸ್ಟೈಲೇ ಫನ್ನಿಯಾಗಿತ್ತು. ಇದೇ ರೀತಿಯ ಸನ್ನಿವೇಶ ನೀವು ಕೂಡಾ ಬಾಲ್ಯದಲ್ಲಿ ಅನುಭವಿಸಿರ್ತಿರಾ..? ನಿಮಗೂ ಕೂಡಾ ಇಂಥಹ ನೋವು ಆಗಿರಬಹುದು. ನೆಟ್ಟಿಗರು ಈ ವಿಡಿಯೋ ನೋಡಿ ತಮ್ಮ ತಮ್ಮ ಬಾಲ್ಯದ ದಿನಗಳನ್ನ ನೆನಪಿಸಿಕೊಳ್ಳುತ್ತಿದ್ದಾರೆ. ಅನೇಕರಂತೂ ತಾವು ಶಾಲೆಗೆ ಹೋಗುವ ಸಮಯ ಬಂದಾಗೆಲ್ಲ ನನ್ನ ಪರಿಸ್ಥಿತಿಯೂ ಹೀಗೆಯೇ ಇತ್ತು ಅಂತ ಕಾಮೆಂಟ್ಗಳನ್ನ ಹಾಕಿದ್ದಾರೆ. https://twitter.com/TheFigen/status/1547222528875237376?ref_src=twsrc%5Etfw%7Ctwcamp%5Etweetembed%7Ctwterm%5E1547222528875237376%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Flittle-boy-s-hilarious-expression-in-kickboxing-class-is-too-funny-to-miss-that-s-me-say-netizens-1975676-2022-07-14 Poor fella…not a happy camper at all. 😔 Or maybe he’s just tired. — Vicky de Castro (@torideca) July 13, 2022 Full respect to the adult stopping the boy from laughing at him xxx — Sugar Tits (@CharlieUK21) July 13, 2022 Childhood memories — Farhan Ahmed🇵🇰 (@farhans17) July 13, 2022 😂 sunday school exams — 👀 (@bow_bow_bowbow) July 13, 2022 Oh my my he's so me 🥺 — 𝙕𝙪𝙗𝙖𝙧𝙞𝙖 𝙕𝙖𝙝𝙤𝙤𝙧 (زُبَارِیہ ) (@zeee_square) July 13, 2022 That is me when my wife signed me up for dancing class 😄 — WSTrendAnalysis (@WSTrendAnalysis) July 14, 2022