ಕೊರೊನಾ ವೈರಸ್ ಇನ್ನೂ ನಿರ್ನಾಮ ಆಗಿಲ್ಲ. ಈಗಲೂ ದಿನದಿನಕ್ಕೂ ಕೊರೊನಾ ಸೋಂಕಿನ ಪ್ರಕರಣಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಲೇ ಇರುತ್ತೆ. ಆಗಲೇ ಈ ವರ್ಷದ ಮೊಟ್ಟ ಮೊದಲ ಝಿಕಾ ವೈರಸ್ ಸೋಂಕು 7ವರ್ಷದ ಬಾಲಕಿಯಲ್ಲಿ ಕಾಣಿಸಿಕೊಂಡಿದೆ.
ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯಲ್ಲಿ 7 ವರ್ಷದ ಬಾಲಕಿಯಲ್ಲಿ ಝಿಕಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಈಡೀಸ್ ಈಜಿಪ್ಟಿ ಸೊಳ್ಳೆ ಕಡಿತದಿಂದ ಹರಡುವ ಝಿಕಾ ವೈರಸ್ ಸೋಂಕು ರಾಷ್ಟ್ರದಲ್ಲಿ ವರ್ಷದ ನಂತರ ಕಾಣಿಸಿಕೊಂಡಿದೆ. ಕಳೆದ ವರ್ಷ ಅಂದ್ರೆ 2021ರಲ್ಲಿ ವೈರಸ್ ಪುಣೆಯಲ್ಲಿ ಮೊದಲ ಕೇಸ್ ಪತ್ತೆಯಾಗಿತ್ತು.
‘ಮುಂಬೈ ಸಮೀಪದ ಪಾಲ್ಗರ್ ಜಿಲ್ಲೆಯ ತಲಸೇರಿ ತಾಲ್ಲೂಕಿನ ಆಶ್ರಮ ಶಾಲೆಯ ವಿದ್ಯಾರ್ಥಿನಿಗೆ ಝಿಕಾ ವೈರಸ್ ಸೋಂಕು ತಗುಲಿದೆ. ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿನಿಯನ್ನ ಪರೀಕ್ಷೆಗೆ ಒಳಪಡಿಸಿದಾಗ ಆಕೆಗೆ ಸೋಂಕು ಇರುವುದು ಧೃಡವಾಗಿದೆ. ಎಂದು ಆರೋಗ್ಯ ಇಲಾಖೆ ತಿಳಿಸಿದೆ.
‘ಬಾಲಕಿಯಲ್ಲಿ ಜ್ವರ ಹೊರತುಪಡಿಸಿ ಬೇರೆ ಯಾವುದೇ ಲಕ್ಷಣಗಳು ಕಾಣಿಸಿಲ್ಲ. ಬಾಲಕಿ ಈಗ ಆರೋಗ್ಯವಾಗಿದ್ದಾಳೆ.‘ ಎಂದು ರಾಜ್ಯ ಆರೋಗ್ಯ ಸರ್ವೇಕ್ಷಣಾಧಿಕಾರಿ ಪ್ರದೀಪ್ ಅವಟೆ ತಿಳಿಸಿದ್ದಾರೆ.