ನವದೆಹಲಿ: ಚೀನಾ ಮೂಲದ ಒಪ್ಪೋ ಇಂಡಿಯಾ ಕಂಪನಿಯಿಂದ ಭಾರಿ ವಂಚನೆ ನಡೆದಿದೆ. 4389 ಕೋಟಿ ರೂಪಾಯಿ ಕಸ್ಟಮ್ ಡ್ಯೂಟಿ ವಂಚಿಸಲಾಗಿದೆ.
ಒಪ್ಪೋ ಮತ್ತು ರಿಯಲ್ ಮಿ ಮೊಬೈಲ್ ಗಳನ್ನು ಉತ್ಪಾದಿಸುವ ಒಪ್ಪೋ ಇಂಡಿಯಾ ಕಂಪನಿ ವಂಚಿಸಿರುವುದು ರೆವೆನ್ಯೂ ಇಂಟಲಿಜೆನ್ಸ್ ದಾಳಿಯ ವೇಳೆ ಬೆಳಕಿಗೆ ಬಂದಿದೆ. ಸ್ವಪ್ರೇರಣೆಯಿಂದ ಒಪ್ಪೋ ಕಂಪನಿ 450 ಕೋಟಿ ಠೇವಣಿ ಇಟ್ಟಿದೆ. ಮೊಬೈಲ್ ಫೋನ್ ಗಳ ತಯಾರಿಕೆಯಲ್ಲಿ ಬಳಸಲು Oppo ಇಂಡಿಯಾ ಆಮದು ಮಾಡಿಕೊಂಡ ಕೆಲವು ವಸ್ತುಗಳ ವಿವರಣೆಯಲ್ಲಿ ಉದ್ದೇಶಪೂರ್ವಕವಾಗಿ ತಪ್ಪು ಘೋಷಣೆ ಮಾಡಲಾಗಿದೆ.
ಮೊಬೈಲ್ ಫೋನ್ ಉತ್ಪಾದನೆಗೆ ಆಮದು ಮಾಡಿಕೊಳ್ಳಲಾಗಿದ್ದ ಬಗ್ಗೆ ಸರಿಯಾಗಿ ಘೋಷಣೆ ಮಾಡದೆ ವಂಚಿಸಲಾಗಿದೆ. ಬಾಕಿ 4389 ಕೋಟಿ ಪಾವತಿ ಮಾಡಬೇಕೆಂದು ಒಪ್ಪೋ ಇಂಡಿಯಾ ಕಂಪನಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಕೇಂದ್ರ ಹಣಕಾಸು ಇಲಾಖೆಯಿಂದ ಈ ಬಗ್ಗೆ ಮಾಹಿತಿ ನೀಡಲಾಗಿದೆ.