ಹಿರಿಯ ಸಾಹಿತಿ ದೇವನೂರು ಮಹಾದೇವ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುರಿತು ಬರೆದಿರುವ ‘ಆರ್.ಎಸ್.ಎಸ್. ಆಳ – ಅಗಲ’ ಪುಸ್ತಕ ಈಗ ದೊಡ್ಡ ಮಟ್ಟದ ಚರ್ಚೆಯಲ್ಲಿದೆ. ಮಾಧ್ಯಮಗಳಲ್ಲಿ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಈ ಪುಸ್ತಕದ ಕುರಿತು ಪರ – ವಿರೋಧದ ಅಭಿಪ್ರಾಯಗಳು ಕೇಳಿ ಬರುತ್ತಿವೆ.
ಇದರ ಮಧ್ಯೆ ಈ ಪುಸ್ತಕವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ದೇವನೂರು ಮಹಾದೇವ ಅವರಿಗೆ ಹೇಳಿ ಬರೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಈ ಕುರಿತು ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವ ವೇಳೆ ಸ್ಪಷ್ಟನೆ ನೀಡಿದ್ದಾರೆ.
‘ಆರ್.ಎಸ್.ಎಸ್. ಆಳ – ಅಗಲ’ ಪುಸ್ತಕವನ್ನು ನಾನು ಹೇಳಿ ಬರೆಸಿಲ್ಲ. ದೇವನೂರು ಮಹದೇವ ಗಣ್ಯ ಸಾಹಿತಿ. ಅವರು ನನ್ನ ಒಳ್ಳೆಯ ಸ್ನೇಹಿತರೂ ಹೌದು. ಹಾಗಂತ ನಾನು ಹೇಳಿ ಈ ಪುಸ್ತಕವನ್ನು ಬರೆಸಿಲ್ಲ. ದೇವನೂರು ನಮ್ಮ ಪಕ್ಷದ ಮುಖಂಡರೂ ಅಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.