ನಾಗಾಲ್ಯಾಂಡ್ ಸಚಿವ ಟೆಮ್ಜೆನ್ ಇಮ್ನಾ ಅಲಾಂಗ್ ಟ್ವಿಟರ್ ಇದೀಗ ಸೋಶಿಯಲ್ ಮೀಡಿಯಾ ಸೆನ್ಸೇಷನ್ ಆಗಿದ್ದಾರೆ. ಉನ್ನತ ಶಿಕ್ಷಣ ಮತ್ತು ಬುಡಕಟ್ಟು ವ್ಯವಹಾರಗಳ ಸಚಿವ ತಮ್ಮ ಸಣ್ಣ ಕಣ್ಣುಗಳ ಕಾರಣಕ್ಕೆ ವೈರಲ್ ಆಗಿದ್ದರು.
ಇದಾದ ಬಳಿಕ ಗೂಗಲ್ನಲ್ಲಿ ತಮ್ಮ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಇದರಲ್ಲಿ ಒಂದು ಪ್ರಶ್ನೆಯಲ್ಲಿ ಟೆಮ್ಜೆನ್ ಇಮ್ನಾ ಅಲಾಂಗ್ ಪತ್ನಿ ಬಗ್ಗೆ ಹುಡುಕಾಟ ನಡೆಸಲಾಗಿತ್ತು. ಈ ಪ್ರಶ್ನೆಗೆ ಫನ್ನಿಯಾಗಿ ಉತ್ತರಿಸಿದ ಅಲಾಂಗ್, ಅರೆ….. ಗೂಗಲ್ನ ಈ ಹುಡುಕಾಟ ನನ್ನನ್ನೂ ಪ್ರಚೋದಿಸುತ್ತಿದೆ. ನಾನು ಕೂಡ ಆಕೆಗಾಗಿ ಹುಡಕಾಡುತ್ತಿದ್ದೇನೆ ಎಂದು ನಗುವ ಎಮೋಜಿಯೊಂದಿಗೆ ಟ್ವಿಟರ್ನಲ್ಲಿ ಟ್ವೀಟಾಯಿಸಿದ್ದಾರೆ.
ಅಲಾಂಗ್ರ ಈ ಟ್ವೀಟ್ಗೆ ಶಾದಿ ಡಾಟ್ ಕಾಮ್ನ ಸಂಸ್ಥಾಪಕ ಅನುಪಮ್ ಮಿತ್ತಲ್ ಪ್ರತಿಕ್ರಿಯಿಸಿದ್ದು ಇದಕ್ಕಾಗಿ ನಾವು ಏನಾದರೂ ಮಾಡಬೇಕು ಎಂದಿದ್ದಾರೆ. ಅನುಪಮ್ರ ಈ ಪ್ರತಿಕ್ರಿಯೆಗೆ ನಗುತ್ತಲೇ ಉತ್ತರಿಸಿದ ಅಲಾಂಗ್, ಸಹೋದರ ಸಧ್ಯಕ್ಕೆ ನಾನು ಬಿಂದಾಸ್ ಆಗಿದ್ದೇನೆ. ಸಲ್ಮಾನ್ ಭಾಯ್ಗಾಗಿ ಕಾಯುತ್ತಿದ್ದೇನೆ ಎಂದು ಬರೆದಿದ್ದಾರೆ.
ಈ ಟ್ವೀಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಶಾದಿ.ಕಾಮ್ ಅಧಿಕೃತ ಟ್ವಿಟರ್ ಖಾತೆ ಕೂಡ ಇದು ನಿಮ್ಮ ಸಮಯ ಸರ್. ಬನ್ನಿ ಎಂದು ಪ್ರತಿಕ್ರಿಯಿಸಿದೆ.