alex Certify ಬ್ಯಾಗ್ ಹಾಕಿಕೊಂಡು ಕುದುರೆಯೇರಿದ್ದ ವ್ಯಕ್ತಿಯನ್ನು ಕೊನೆಗೂ ಕಂಡುಹಿಡಿದ ಸ್ವಿಗ್ಗಿ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಗ್ ಹಾಕಿಕೊಂಡು ಕುದುರೆಯೇರಿದ್ದ ವ್ಯಕ್ತಿಯನ್ನು ಕೊನೆಗೂ ಕಂಡುಹಿಡಿದ ಸ್ವಿಗ್ಗಿ..!

ಮಹಾನಗರಿ ಮುಂಬೈ ಮಳೆಯಂದು ಸ್ವಿಗ್ಗಿ ಬ್ಯಾಗ್ ಹೊತ್ತುಕೊಂಡು ಕುದುರೆ ಸವಾರಿ ಮಾಡುತ್ತಿದ್ದ ವ್ಯಕ್ತಿಯನ್ನು ಸ್ವಿಗ್ಗಿ ಸಂಸ್ಥೆ ಕೊನೆಗೂ ಕಂಡು ಹಿಡಿದಿದೆ. ತೀವ್ರ ಮಳೆಯ ಸಮಯದಲ್ಲಿ ಆಹಾರವನ್ನು ತಲುಪಿಸುವ ವಿನೂತನ ವಿಧಾನ ಕಂಡುಕೊಂಡಿದ್ದ ಡೆಲಿವರಿ ಬಾಯ್ ನನ್ನು ಕಂಡುಹಿಡಿಯಲು ಸ್ವಿಗ್ಗಿ ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನ ಆರಂಭಿಸಿತ್ತು. ಇದೀಗ ಈ ವ್ಯಕ್ತಿಯನ್ನು ಸ್ವಿಗ್ಗಿ ಪತ್ತೆಹಚ್ಚಿದೆ.

ಹೌದು, ಸ್ವಿಗ್ಗಿ ಆಹಾರ ವಿತರಣೆಯ ಬ್ಯಾಗ್ ಅನ್ನು ಧರಿಸಿ ಕುದುರೆಯೇರಿ ಹೊರಟಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಲಾಗಿದೆ. ಆ ವ್ಯಕ್ತಿಯನ್ನು 17 ವರ್ಷ ವಯಸ್ಸಿನ ಸುಶಾಂತ್ ಎನ್ನಲಾಗಿದೆ. ಈತ ಕುದುರೆ ಕೌಟೂರಿಯರ್ ಆಗಿದ್ದು, ಆತ ಡೆಲಿವರಿ ಬಾಯ್ ಅಲ್ಲ ಎಂದು ತಿಳಿದುಬಂದಿದೆ. ಕುದುರೆಯೇರಿ ಹೋಗುತ್ತಿದ್ದ ಈ ದೃಶ್ಯವನ್ನು ಅವಿ ಎಂಬಾತ ಫೋಟೋ ಕ್ಲಿಕ್ಕಿಸಿದ್ದ.

ಸ್ವಿಗ್ಗಿ ಸಂಸ್ಥೆಯ ಬ್ಯಾಗ್ ಅನ್ನು ಬೆನ್ನಿಗೆ ಹಾಕಿಕೊಂಡು ಕುದುರೆ ಮೇಲೆ ಸವಾರಿ ಮಾಡಿದಾತನನ್ನು ಪತ್ತೆಹಚ್ಚುವವರಿಗೆ 5,000 ರೂ. ಬಹುಮಾನ ನೀಡಲಾಗುವುದು ಎಂದು ಘೋಷಿಸಿತ್ತು. ಇದೀಗ ಆ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದು ಬಂದಿದೆ. ವಿಡಿಯೋ ಮಾಡಿದವರಿಂದಲೇ ಸ್ವಿಗ್ಗಿ ಮಾಹಿತಿ ಪಡೆದಿದೆ.

ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಜನಪ್ರಿಯವಾಗಿರುವ 17 ವರ್ಷದ ಸುಶಾಂತ್ ಮುಂಬೈನ ಸ್ಟೇಬಲ್‌ನಲ್ಲಿ ಕೌಟೂರಿಯರ್ ಆಗಿ ಕೆಲಸ ಮಾಡುತ್ತಾನೆ. ಆತ ಮದುವೆಯ ಮೆರವಣಿಗೆಗೆ ಕುದುರೆಯನ್ನು ಕರೆದೊಯ್ದು ಹಿಂತಿರುಗುತ್ತಿದ್ದ ಎಂದು ತಿಳಿದುಬಂದಿದೆ.

https://twitter.com/Swiggy/status/1545793618358575106?ref_src=twsrc%5Etfw%7Ctwcamp%5Etweetembed%7Ctwterm%5E1545793618358575106%7Ctwgr%5E%7Ctwcon%5Es1_&ref_url=https%3A%2F%2Fzeenews.india.com%2Fcompanies%2Fswiggy-finds-mystery-horse-rider-from-viral-video-says-he-is-not-a-delivery-boy-2484102.html

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...