ಬಾಡಿಗೆಗೆ ಗದ್ದೆ……400 ರೂಪಾಯಿಗೆ ಕಾರ್ಮಿಕರು……ಇದು ಡುಪ್ಲಿಕೇಟ್ ಕ್ರಿಕೆಟ್ ಪ್ರೀಮಿಯರ್ ಲೀಗ್: ಐಪಿಎಲ್ ಹೆಸರಲ್ಲಿ ಬುಕ್ಕಿಗಳಿಗೆ ಪಂಗನಾಮ 12-07-2022 11:16AM IST / No Comments / Posted In: Latest News, Live News, Sports ಐಪಿಎಲ್ ಸೀಸನ್ ಬಂದ್ರೆ ಸಾಕು, ದೇಶದಲ್ಲಿ ಹೊಸ ಸಂಚಲನ ಹುಟ್ಟು ಹಾಕಿದಂತಿರುತ್ತೆ. ಕ್ರಿಕೆಟ್ ಜ್ವರ ಎಲ್ಲರಿಗೂ ಶುರುವಾಗಿ ಬಿಡುತ್ತೆ. ಐಪಿಎಲ್‌ನಲ್ಲಿ ತಮ್ಮ ಫೆವರೇಟ್ ತಂಡ ಯಾವ ರೀತಿ ಆಡುತ್ತೆ. ತಮ್ಮ ಇಷ್ಟದ ಆಟಗಾರನ ಪ್ರದರ್ಶನ ಹೇಗಿರುತ್ತೆ ಅನ್ನೊ ಕುತೂಹಲ ಕ್ರಿಕೆಟ್ ಪ್ರೇಮಿಗಳಿಗೆ ಸಹಜವಾಗಿ ಇರುತ್ತೆ. ಕೆಲವರು ಇದನ್ನ ಮನರಂಜನಾ ದೃಷ್ಟಿಯಿಂದ ನೋಡಿದ್ರೆ ಇನ್ನೂ ಕೆಲವರು ಬೆಟ್ಟಿಂಗ್ ಕಟ್ಟುತ್ತಾರೆ. ಅದರಲ್ಲೂ ಬುಕ್ಕಿಗಳಿಂಗಂತೂ ಐಪಿಎಲ್ ಶುರುವಾದ್ರೆ ಸಾಕು ಹಣದ ಹೊಳೆಯೇ ಹರಿದು ಬಂದಿರುತ್ತೆ. ಆದರೆ ಗುಜರಾತ್‌ನಲ್ಲಿ ಬುಕ್ಕಿಗಳಿಗೇನೇ ಮೂರು ನಾಮ ಹಾಕಿದ್ದಾರೆ ಖದೀಮರು. ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಐಪಿಎಲ್ ಹೆಸರಿನಲ್ಲಿ ಫೋರ್ಜರಿ ಆಟವನ್ನು ಪ್ಲಾನ್ ಮಾಡಲಾಗಿದೆ. ಮಾಸ್ಟರ್ ಮೈಂಡ್ ವ್ಯಕ್ತಿಯೊಬ್ಬ ಐಪಿಎಲ್ ಹೆಸರಿನಲ್ಲಿ ರಷ್ಯಾದಲ್ಲಿ ಕುಳಿತಿರುವ ಬುಕ್ಕಿಗಳಿಗೆ ಆಮಿಷವೊಡ್ಡಿದ್ದಾನೆ. ನಕಲಿ ಐಪಿಎಲ್ಗಾಗಿ ಇಲ್ಲಿ ಒಂದು ಫಾರ್ಮ ಹೌಸ್‌ನ್ನ ಬಾಡಿಗೆಗೆ ಪಡೆದಿದ್ದಾನೆ. ಅಷ್ಟೆ ಅಲ್ಲ ಇದೇ ಫಾರ್ಮಿನಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ದಿನಕ್ಕೆ 400 ರೂಪಾಯಿ ಆಮಿಷವೊಡ್ಡಿ ಕ್ರಿಕೆಟ್ ಆಡುವಂತೆ ಹೇಳಲಾಗಿದೆ. ದುಡ್ಡು ಸಿಗುತ್ತೆ ಅಂತ ಆ ಕಾರ್ಮಿಕರು ಆಟ ಆಡಿದ್ದಾರೆ. ಈ ನಕಲಿ ಐಪಿಎಲ್ ಆಯೋಜಕರು ಬೆಟ್ಟಿಂಗ್‌ಗಾಗಿ ರಷ್ಯಾದಿಂದ 3ಲಕ್ಷ ರೂಪಾಯಿ ಸಹ ಮೊದಲ ಕಂತನ್ನಾಗಿ ಪಡೆದಿದ್ದರು. ಹರ್ಷ ಭೋಗ್ಲೆಯನ್ನ ಅನುಕರಿಸುವ ವೀಕ್ಷಕ ವಿವರಣೆಗಾರ, ಸುತ್ತಲೂ ಕ್ರೀಡಾಂಗಣದಲ್ಲಿ ಇರುವಂತಹ ಲೈಟ್‌ಗಳ ವ್ಯವಸ್ಥೆ, ನಕಲಿ ಅಂಪೈರ್ ಹೀಗೆ ಚಿಕ್ಕಪುಟ್ಟದ್ದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು, ಎಲ್ಲವೂ ಡುಪ್ಲಿಕೇಟ್ ಲೋಕವನ್ನ ನಿರ್ಮಾಣ ಮಾಡಲಾಗಿತ್ತು. ಇದರ ಸುಳಿವು ಮೆಹ್ಸಾನಾ ಜಿಲ್ಲೆಯ ಮೊಲಿಪುರ್ ಗ್ರಾಮದ ಜನರಿಗೆ ಸಿಕ್ಕಿದೆ. ತಕ್ಷಣ ಕಾರ್ಯಪ್ರವೃತ್ತರಾದ ಆ ಪೊಲೀಸರು ನಕಲಿ ಐಪಿಎಲ್ ಆಯೋಜಕರನ್ನ ಬಂಧಿಸಿದ್ದಾರೆ. ಈಗಾಗಲೇ 4 ಜನರನ್ನ ಬಂಧಿಸಲಾಗಿದ್ದು, ಇನ್ನೂ ಹೆಚ್ಚಿನ ವಿಚಾರಣೆಯನ್ನ ಮಾಡಲಾಗುತ್ತಿದೆ. Live cricket is set to resume in Sri Lanka through the UVA T20 Premier League! Big names such as Tillakaratne Dilshan, @farveezmaharoof, Ajantha Mendis will be taking part in the competition. #UVAT20 will commence on June 29. https://t.co/AUOzNKdsul — Prasen Moudgal (@Prasen_m4299) June 28, 2020