ವಾರದ ಮೊದಲ ದಿನವೇ ಆಭರಣ ಪ್ರಿಯರ ಪಾಲಿಗೆ ಕೊಂಚ ಚೇತೋಹಾರಿಯಾಗಿದೆ. ಯಾಕಂದ್ರೆ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಕಳೆದ ವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸರಿಸುಮಾರು 1500 ರೂಪಾಯಿ ಕಡಿಮೆಯಾಗಿತ್ತು.
ಚಿನ್ನ ಎಷ್ಟು ಅಗ್ಗ?
ಇಂದು ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 114 ರೂಪಾಯಿಗಳಷ್ಟು ಕುಸಿದು 50,561 ರೂಪಾಯಿಗಳಿಗೆ ತಲುಪಿದೆ. ಕಳೆದ ವಹಿವಾಟಿನಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 50,675 ರೂಪಾಯಿ ಇತ್ತು.
ಬೆಳ್ಳಿ ಬೆಲೆಯಲ್ಲೂ ಇಳಿಕೆ …
ಚಿನ್ನ ಮಾತ್ರವಲ್ಲ ಬೆಳ್ಳಿ ಬೆಲೆ ಕೂಡ ಇಳಿಮುಖವಾಗಿದೆ. ಇಂದಿನ ವಹಿವಾಟಿನ ನಂತರ ಬೆಳ್ಳಿ ಪ್ರತಿ ಕೆಜಿಗೆ 136 ರೂಪಾಯಿ ಇಳಿಕೆಯಾಗಿ 56,760 ರೂಪಾಯಿಗಳಿಗೆ ಬಂದು ತಲುಪಿದೆ. ಕಳೆದ ವಹಿವಾಟಿನಲ್ಲಿ ಬೆಳ್ಳಿ ದರ ಕೆಜಿಗೆ 56,896 ರೂಪಾಯಿ ಇತ್ತು.
ತಜ್ಞರ ಅಭಿಪ್ರಾಯವೇನು?
ಆರ್ಥಿಕ ತಜ್ಞರ ಪ್ರಕಾರ ನ್ಯೂಯಾರ್ಕ್ ಮೂಲದ ಸರಕು ವಿನಿಮಯ ಕೊಮೆಕ್ಸ್‌ನಲ್ಲಿನ ಕುಸಿತವಾಗಿದ್ದರಿಂದ ಅದಕ್ಕೆ ಅನುಗುಣವಾಗಿ ದೆಹಲಿಯಲ್ಲಿ 24-ಕ್ಯಾರೆಟ್ ಚಿನ್ನದ ಬೆಲೆ 114 ರೂಪಾಯಿ ಕಡಿಮೆಯಾಗಿದೆ. ಚಿನ್ನ ಹಾಗೂ ಬೆಳ್ಳಿ ದರ ಇಳಿಮುಖವಾಗಿರುವುದನ್ನು ಗಮನಿಸಿದ್ರೆ ಮುಂಬರುವ ದಿನಗಳಲ್ಲಿ ಹಳದಿ ಲೋಹ ಕೊಂಚ ಅಗ್ಗವಾಗುವ ನಿರೀಕ್ಷೆ ಇದೆ.