ಭಾರತದಾದ್ಯಂತ 73 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೊಂದು ಶುಭ ಸುದ್ದಿ ಇದೆ. ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯು (ಇಪಿಎಫ್‌ಒ) ಪಿಂಚಣಿ ವಿತರಣೆಗೆ ಕೇಂದ್ರೀಕೃತ ವ್ಯವಸ್ಥೆ ರೂಪಿಸುತ್ತಿದೆ.
ಜುಲೈ 29 ಮತ್ತು 30ರಂದು ನಡೆಯುವ ಇಪಿಎಫ್‌ಒ ಸಭೆಯಲ್ಲಿ ಕೇಂದ್ರೀಕೃತ ಪಿಂಚಣಿ ವಿತರಣೆ ವ್ಯವಸ್ಥೆಯನ್ನು ರೂಪಿಸುವ ಪ್ರಸ್ತಾವನೆ ಪರಿಗಣಿಸಿ ಅನುಮೋದಿಸಲಿದೆ.
ಪ್ರಸ್ತುತ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆಯು 138 ಕ್ಕೂ ಹೆಚ್ಚು ಪ್ರಾದೇಶಿಕ ಕಚೇರಿಗಳ ಮೂಲಕ ತಮ್ಮ ಪ್ರದೇಶದ ಫಲಾನುಭವಿಗಳಿಗೆ ಪ್ರತ್ಯೇಕವಾಗಿ ಪಿಂಚಣಿಗಳನ್ನು ವಿತರಿಸುತ್ತವೆ. ಹೀಗಾಗಿ, ವಿವಿಧ ಪ್ರಾದೇಶಿಕ ಕಚೇರಿಗಳ ಪಿಂಚಣಿದಾರರು ವಿವಿಧ ಸಮಯ ಅಥವಾ ದಿನಗಳಲ್ಲಿ ಪಿಂಚಣಿ ಪಡೆಯುತ್ತಿದ್ದಾರೆ.
ಜುಲೈ 29 ಮತ್ತು 30 ರಂದು ನಿಗದಿಪಡಿಸಲಾದ ಸಭೆಯಲ್ಲಿ ಇಪಿಎಫ್‌ಒನ ಅಪೆಕ್ಸ್ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಸೆಂಟ್ರಲ್ ಬೋರ್ಡ್ ಆಫ್ ಟ್ರಸ್ಟಿನಲ್ಲಿ(ಸಿಬಿಟಿ) ಇರಿಸಲಾಗುವುದು ಎಂದು ಮೂಲವೊಂದು ತಿಳಿಸಿದೆ.
ದೇಶದ 138 ಪ್ರಾದೇಶಿಕ ಕಚೇರಿಗಳ ಕೇಂದ್ರೀಯ ಡೇಟಾ ಬಳಸಿಕೊಂಡು ಪಿಂಚಣಿ ವಿತರಿಸಲಾಗುವುದು ಮತ್ತು ಇದು ಒಂದೇ ಬಾರಿಗೆ 73 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಪಿಂಚಣಿ ಮೊತ್ತ ಜಮಾ ಮಾಡಲು ಅನುಕೂಲವಾಗುತ್ತದೆ.
ಕೇಂದ್ರೀಕೃತ ವ್ಯವಸ್ಥೆಯು ಯಾವುದೇ ಸದಸ್ಯರ ಎಲ್ಲಾ ಪಿಎಫ್ ಖಾತೆಗಳ ನಕಲು ಮತ್ತು ವಿಲೀನವನ್ನು ಸುಗಮಗೊಳಿಸುತ್ತದೆ. ಉದ್ಯೋಗ ಬದಲಾವಣೆಯ ಮೇಲೆ ಖಾತೆಯ ವರ್ಗಾವಣೆ ಅಗತ್ಯವನ್ನು ಸಹ ತೆಗೆದುಹಾಕಲಿದೆ.