ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರ ಪತಿ ನಟ ರಣವೀರ್ ಸಿಂಗ್ ಬರೋಬ್ಬರಿ ಬರಿ 119 ಕೋಟಿ ರೂ. ಮೌಲ್ಯದ ಐಷಾರಾಮಿ ಮನೆಯನ್ನು ಖರೀದಿಸಿದ್ದಾರೆ. ಸಮುದ್ರಕ್ಕೆ ಮುಖ ಮಾಡಿಕೊಂಡಿರುವ ಮುಂಬೈನ ಬಾಂಧ್ರಾದಲ್ಲಿರುವ ಈ ಮನೆ ನಾಲ್ಕು ಮಹಡಿಗಳನ್ನು ಹೊಂದಿದ್ದು, ಒಟ್ಟು 11,266 ಚದರಡಿ ಕಾರ್ಪೆಟ್ ಪ್ರದೇಶ ಮತ್ತು 1,300 ಚದರಡಿ ವಿಶೇಷ ಟೆರೇಸ್ ಹೊಂದಿದೆ ಎನ್ನಲಾಗಿದೆ.
ಒಪ್ಪಂದದ ಪ್ರಕಾರ ರಣವೀರ್ ಸಿಂಗ್ ಅವರ ಈ ಮನೆಗೆ 19 ಕಾರ್ ಪಾರ್ಕಿಂಗ್ ಸ್ಲಾಟ್ ಗಳನ್ನು ನೀಡಲಾಗಿದ್ದು, ಸಾಗರ ರೇಷಮ್ ಟವರ್ ನ 16, 17, 18 ಮತ್ತು 19ನೇ ಮಹಡಿಯಲ್ಲಿ ಈ ಮನೆ ಹರಡಿಕೊಂಡಿದೆ. ಇದರ ನೋಂದಣಿ ಜುಲೈ 8ರಂದು ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಮುದ್ರಾಂಕ ಶುಲ್ಕವಾಗಿಯೇ 7.13 ಕೋಟಿ ರೂಪಾಯಿಗಳನ್ನು ಪಾವತಿಸಲಾಗಿದ್ದು, 119 ಕೋಟಿ ರೂಪಾಯಿಯ ಈ ವಹಿವಾಟಿನಲ್ಲಿ ಪ್ರತಿ ಚದರಡಿಗೆ ಒಂದು ಲಕ್ಷ ರೂಪಾಯಿಗಳಿಗೂ ಅಧಿಕ ಹಣವನ್ನು ರಣವೀರ್ ಸಿಂಗ್ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದು ದೇಶದಲ್ಲಿ ಒಂದೇ ವಸತಿ ಅಪಾರ್ಟ್ಮೆಂಟ್ ನಲ್ಲಿ ನಡೆದ ಅತ್ಯಂತ ದುಬಾರಿ ಡೀಲ್ ಗಳ ಪೈಕಿ ಒಂದು ಎಂದು ಪರಿಗಣಿಸಲಾಗಿದೆ.
ರಣವೀರ್ ಸಿಂಗ್ ಖರೀದಿಸಿರುವ ಈ ಮನೆ ಶಾರುಖ್ ಅವರ ‘ಮನ್ನತ್’ ನಿವಾಸದ ಸಮೀಪದಲ್ಲಿಯೇ ಇದೆ ಎಂದು ತಿಳಿದುಬಂದಿದೆ.