ಕಳೆದ ಕೆಲವು ದಿನಗಳಿಂದ ಕೇಬಲ್ ಕಾರುಗಳು ಹಾಗೂ ರೋಪ್ ವೇ ಗಳಲ್ಲಿ ಪದೇ ಪದೇ ತಾಂತ್ರಿಕ ಸಮಸ್ಯೆ ತಲೆದೋರುತ್ತಿದ್ದು ಇದೀಗ ಉತ್ತರಕಾಂಡದ ಡೆಹ್ರಾಡೂನ್ ನಲ್ಲಿ ಮತ್ತೊಂದು ಘಟನೆ ನಡೆದಿದೆ.
ಭಾನುವಾರದಂದು ಮಸ್ಸೂರಿ ಸಮೀಪದ ಸುರ್ಕಂದಾದೇವಿ ದೇವಸ್ಥಾನವನ್ನು ಸಂಪರ್ಕಿಸುವ ಮಾರ್ಗದಲ್ಲಿ ಈ ಘಟನೆ ನಡೆದಿದ್ದು, ರೋಪ್ ವೇ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಉತ್ತರಾಖಂಡದ ಬಿಜೆಪಿ ಶಾಸಕ ಕಿಶೋರ್ ಉಪಾಧ್ಯಾಯ ಸೇರಿದಂತೆ 40ಕ್ಕೂ ಅಧಿಕ ಭಕ್ತರು ಒಂದು ಗಂಟೆಗೂ ಅಧಿಕ ಕಾಲ ಸಿಲುಕಿಕೊಂಡಿದ್ದರು.
ರಕ್ಷಣಾ ಕಾರ್ಯಾಚರಣೆ ಬಳಿಕ ಶಾಸಕರು ಸೇರಿದಂತೆ ಎಲ್ಲರನ್ನೂ ರಕ್ಷಿಸಲಾಗಿದೆ. ಉತ್ತರಾಖಂಡ ರಾಜ್ಯ ರಚನೆಯಾದ ನಂತರ ಪ್ರವಾಸೋದ್ಯಮ ಇಲಾಖೆ ಆರಂಭಿಸಿದ ಮೊದಲ ರೋಪ್ ವೇ ಯೋಜನೆ ಇದಾಗಿದ್ದು, 5 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.