ನವದೆಹಲಿ: ನೂತನ ಕಾರ್ಮಿಕ ಕಾನೂನು ಸಂಹಿತೆ ಜಾರಿ ವಿಳಂಬವಾಗಿದೆ, ಪಿಎಫ್ ಕೊಡುಗೆಯಲ್ಲಿ ಬದಲಾವಣೆ, ವಾರದಲ್ಲಿ ನಾಲ್ಕು ದಿನ, ಕೆಲಸ ಮೂರು ದಿನ ರಜೆ ಸೇರಿದಂತೆ ಹಲವು ನಿಯಮಗಳನ್ನು ಒಳಗೊಂಡ ನೂತನ ಕಾರ್ಮಿಕ ಕಾನೂನು ಜಾರಿ ಪ್ರಕ್ರಿಯೆ ವಿಳಂಬವಾಗಿದೆ. ಜುಲೈ 1 ರಿಂದಲೇ ನೂತನ ಕಾರ್ಮಿಕ ಸಂಹಿತೆ ಜಾರಿ ಆಗಬೇಕಿತ್ತು. ಆದರೆ, ಕೆಲವು ರಾಜ್ಯಗಳಲ್ಲಿ ನಿಯಮಗಳ ಕರಡು ರೂಪಿಸದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕಾನೂನು ಜಾರಿಗೆ ವಿಳಂಬ ಮಾಡುತ್ತಿದೆ ಎಂದು ಹೇಳಲಾಗಿದೆ.
ಕಾರ್ಮಿಕ ಸಂಹಿತೆಗೆ ಸಂಬಂಧಿಸಿದ 29 ನಿಯಮಗಳನ್ನು ಒಂದು ಮಾಡಿ ಕೇಂದ್ರ ಸರ್ಕಾರ 4 ಸಂಹಿತೆಗಳನ್ನಾಗಿ ರೂಪಿಸಿದೆ.
ಜುಲೈ 1ರಿಂದ ಜಾರಿಯಾಗಬೇಕಿದ್ದ ನೂತನ ಕಾರ್ಮಿಕ ಸಂಹಿತೆಯಲ್ಲಿ ವಾರದಲ್ಲಿ ನಾಲ್ಕು ದಿನ ಕೆಲಸ, ಮೂರು ದಿನ ರಜೆ, ಪಿಎಫ್ ಗೆ ಉದ್ಯೋಗಿ ಹಾಗೂ ಉದ್ಯೋಗದಾತರ ಕೊಡುಗೆ ಬದಲಾವಣೆ ಸೇರಿದಂತೆ ಹಲವು ನಿಯಮಗಳನ್ನು ರೂಪಿಸಲಾಗಿತ್ತು.
ವೇತನ ಸಂಹಿತೆ, ಸಾಮಾಜಿಕ ಭದ್ರತೆ ಸಂಹಿತೆ, ಔದ್ಯೋಗಿಕ ಸುರಕ್ಷತೆ ಆರೋಗ್ಯ ಸಂಹಿತೆ ಹಾಗೂ ಕೆಲಸದ ಪರಿಸ್ಥಿತಿಗಳ ಸಂಹಿತೆ, ಕೈಗಾರಿಕೆ ಸಂಬಂಧಪಟ್ಟ ಸಂಹಿತೆ ರೂಪಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕರಡು ನಿಯಮಗಳನ್ನು ರೂಪಿಸದ ಕಾರಣ ಜಾರಿ ವಿಳಂಬವಾಗಿದೆ ಎಂದು ಹೇಳಲಾಗಿದೆ.