ಇತ್ತೀಚೆಗೆ ದೇಸಿ ವಿವಾಹದ ವಿಡಿಯೋಗಳು ಹೆಚ್ಚಾಗಿ ವೈರಲ್ ಆಗುತ್ತಿರುತ್ತದೆ. ಅಂತರ್ಜಾಲವು ನೃತ್ಯ ಪ್ರದರ್ಶನಗಳಿಂದ ಹಿಡಿದು ವಧುವಿನ ಪ್ರವೇಶದವರೆಗೆ ವಿವಾಹಗಳ ಅದ್ಭುತ ವಿಡಿಯೋಗಳಿಂದ ತುಂಬಿದೆ.
ಭಾರತೀಯ ವಿವಾಹಗಳು ವಿನೋದ, ಪ್ರೀತಿ, ಸಂಗೀತ, ನೃತ್ಯ, ಸಂಪ್ರದಾಯ ಮುಂತಾದವುಗಳಿಂದ ತುಂಬಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ಖಂಡಿತಾ ನಿಮಗೆ ಇಷ್ಟವಾಗಬಲ್ಲದು.
ವೆಡ್ಲಾಕ್ ಫೋಟೋಗ್ರಫಿ ಅಸ್ಸಾಂ ಪುಟದಿಂದ ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಇದು 1.8 ಮಿಲಿಯನ್ ಲೈಕ್ಗಳನ್ನು ಸ್ವೀಕರಿಸಿದೆ. ವಧು-ವರ, ಸ್ನೇಹಿತರು ಮತ್ತು ಕುಟುಂಬವನ್ನು ಸುತ್ತುವರೆದಿರುವುದನ್ನು ವಿಡಿಯೋ ತೋರಿಸುತ್ತದೆ.
ನಂತರ ಅವಳು ಮದುವೆಯಾದ ನಂತರ ವರನು ಉಳಿಸಿಕೊಳ್ಳಬೇಕಾದ ಭರವಸೆಗಳನ್ನು ಒಳಗೊಂಡಿರುವ ಬೃಹತ್ ಹಾಳೆಯ ಮೇಲೆ ಮುದ್ರಿತವಾದ ವಿಶೇಷ ಒಪ್ಪಂದಕ್ಕೆ ಸಹಿ ಹಾಕುವಂತೆ ವರನನ್ನು ಕೇಳಿಕೊಂಡಿದ್ದಾಳೆ.
ಒಪ್ಪಂದವು ವಧುವನ್ನು ಸಂತೋಷವಾಗಿರಿಸಲು ವರನು ಪೂರೈಸಬೇಕಾದ ಕೆಲವು ಷರತ್ತುಗಳ ಪಟ್ಟಿಯಾಗಿದೆ. ಮೊದಲ ಷರತ್ತು ತಿಂಗಳಿಗೆ ಒಂದು ಪಿಜ್ಜಾ ಆರ್ಡರ್ ಮಾಡಬಹುದು. ಮುಂದಿನ ಷರತ್ತುಗಳೆಂದರೆ ಮನೆಯ ಆಹಾರವನ್ನೇ ಜಾಸ್ತಿ ಇಷ್ಟಪಡಬೇಕು. ಹಾಗೂ ತಡರಾತ್ರಿಯ ಪಾರ್ಟಿಗಳನ್ನು ಅನುಮತಿಸಲಾಗುತ್ತದೆ ಆದರೆ ಹೆಂಡತಿಯೊಂದಿಗೆ ಮಾತ್ರ ಎಂಬ ಷರತ್ತು ವಿಧಿಸಲಾಗಿದೆ.
ಮದುವೆಯ ಆಚರಣೆಯನ್ನು ಪೂರ್ಣಗೊಳಿಸಿದ ನಂತರ ವಧು-ವರ ಈ ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ರು. ಪ್ರತಿ 15 ದಿನಗಳಿಗೊಮ್ಮೆ ವಧುವನ್ನು ಶಾಪಿಂಗ್ಗೆ ಕರೆದೊಯ್ಯುವುದು ಮತ್ತು ಪಾರ್ಟಿಗಳಲ್ಲಿ ಆಕೆಯ ಉತ್ತಮ ಫೋಟೋಗಳನ್ನು ಕ್ಲಿಕ್ ಮಾಡಬೇಕೆಂಬ ಷರತ್ತು ಕೂಡ ಇದೆ. ಒಪ್ಪಂದದ ಇನ್ನೊಂದು ಷರತ್ತು ಏನೆಂದರೆ ವರ ಭಾನುವಾರದಂದು ಉಪಹಾರವನ್ನು ಮಾಡಬೇಕೆಂದು ಸಹ ಉಲ್ಲೇಖಿಸುತ್ತದೆ. ಈ ಒಪ್ಪಂದದ ವಿಡಿಯೋ ನೆಟ್ಟಿಗರನ್ನು ರಂಜಿಸಿದೆ.
https://youtu.be/vmUJhRYopr8