ನಮ್ಮ ದೇಹಕ್ಕೆ ಪ್ರತಿ ದಿನ 3-4 ಲೀಟರ್ ನೀರಿನ ಅವಶ್ಯಕತೆಯಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ದೇಹ ನೀರನ್ನು ಬಯಸುವುದಿಲ್ಲ. ಬಾಯಾರಿಕೆಯಾಗುವುದಿಲ್ಲ. ಆದ್ರೆ ಕಡಿಮೆ ನೀರು ಸೇವನೆಯಿಂದ ಸಾಕಷ್ಟು ಅನಾರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ. ಹಾಗೆ ಬಹುತೇಕರು ಮಳೆಗಾಲವಿರಲಿ ಇಲ್ಲ ಯಾವುದೇ ಸಮಯವಿರಲಿ ತಣ್ಣೀರಿನ ಸೇವನೆ ಮಾಡ್ತಾರೆ. ಆಯುರ್ವೇದದ ಪ್ರಕಾರ ಬಿಸಿ ನೀರು ಸೇವನೆ ಆರೋಗ್ಯಕ್ಕೆ ಉತ್ತಮ.
ಮಳೆಗಾಲದಲ್ಲಿ ಅವಶ್ಯಕವಾಗಿ ಬಿಸಿ ನೀರಿನ ಸೇವನೆ ಮಾಡಬೇಕು. ಇದ್ರಿಂದ ಕಫ ಕರಗುತ್ತದೆ. ದಿನಕ್ಕೆ ಮೂರದಿಂದ ನಾಲ್ಕು ಬಾರಿ ಬಿಸಿಬಿಸಿ ನೀರನ್ನು ಸೇವಿಸಬೇಕು. ಬೆಚ್ಚಗಿನ ನೀರಿಗೆ ಉಪ್ಪು ಹಾಕಿ ಬಾಯಿ ಮುಕ್ಕಳಿಸಬೇಕು. ಗಂಟು, ಧ್ವನಿ ಸಮಸ್ಯೆಯನ್ನು ಇದು ಕಡಿಮೆ ಮಾಡುತ್ತದೆ.
ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಸೇವಿಸಬೇಕು. ದೇಹದ ಚಯಾಪಚಯ ಸಲಭವಾಗುತ್ತದೆ. ಕೊಬ್ಬು ಕರಗಿ ತೂಕ ಕಡಿಮೆಯಾಗುತ್ತದೆ.
ಜನರು ನಿರ್ಲಕ್ಷ್ಯದಿಂದ ಆಹಾರ ಸೇವನೆ ಮಾಡ್ತಾರೆ. ಆಹಾರವನ್ನು ಸರಿಯಾಗಿ ಅಗೆಯುವುದಿಲ್ಲ. ಇದ್ರಿಂದ ಅಜೀರ್ಣ ಕಾಡುತ್ತದೆ. ಅಂತವರಿಗೆ ಬಿಸಿ ನೀರು ಉತ್ತಮ. ಮಲಬದ್ಧತೆ, ಆಮ್ಲೀಯತೆ ಮತ್ತು ಅನಿಲ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.
ವಯಸ್ಸಾದವರಿಗೆ ನಿಯಮಿತ ವ್ಯಾಯಾಮ ಸಾಧ್ಯವಿಲ್ಲ. ಅಂತವರು ಬಿಸಿ ನೀರು ಸೇವನೆ ಮಾಡುವುದ್ರಿಂದ ಬೆವರುತ್ತದೆ. ಇದ್ರಿಂದ ದೇಹದ ಒಳಗಿನ ಕೆಟ್ಟ ಪದಾರ್ಥ ಬೆವರಿನ ಮೂಲಕ ಹೊರಗೆ ಹೋಗುತ್ತದೆ.
ದೇಹದಲ್ಲಿ ಉತ್ತಮ ರಕ್ತ ಪರಿಚಲನೆಯಾಗ್ಬೇಕು. ಎಲ್ಲಾ ಅಂಗಗಳಲ್ಲಿ ರಕ್ತ ಪರಿಚಲನೆ ಇಲ್ಲದಿದ್ದರೆ, ದೇಹದ ಎಲ್ಲ ಭಾಗಗಳಲ್ಲಿ ನೋವು ಕಾಡುತ್ತದೆ. ಬಿಸಿ ನೀರಿನ ಸೇವನೆಯಿಂದ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಕಡಿಮೆಯಾಗುತ್ತದೆ.
ಅತಿಯಾದ ಆಯಾಸದ ಸಮಸ್ಯೆ ಇರುವವರಿಗೆ ಬಿಸಿನೀರು ಉತ್ತಮ ಚಿಕಿತ್ಸೆಯಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರನ್ನು ಕುಡಿಯುವುದರಿಂದ ಕೆಲವು ದಿನಗಳಲ್ಲಿ ಆಯಾಸದ ಸಮಸ್ಯೆ ಬಗೆಹರಿಯುತ್ತದೆ.