ರಾಜಮೌಳಿ ನಿರ್ದೇಶನದ ಪ್ರಭಾಸ್ ನಟನೆಯ ಸೂಪರ್ ಡೂಪರ್ ಹಿಟ್ ಸಿನಿಮಾ ‘ಬಾಹುಬಲಿ ದಿ ಬಿಗಿನಿಂಗ್’ ಬಿಡುಗಡೆಯಾಗಿ ಇಂದಿಗೆ 7 ವರ್ಷಗಳಾಗಿವೆ.
ಟಾಲಿವುಡ್ ಮಾತ್ರವಲ್ಲದೆ ಇಡಿ ಭಾರತ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಈ ಚಿತ್ರವನ್ನು ಅರ್ಕ ಮೀಡಿಯಾ ವರ್ಕ್ಸ್ ಬ್ಯಾನರ್ ನಡಿ ಶೋಬು ಯರ್ಲಗಡ್ಡ ಹಾಗೂ ಪ್ರಸಾದ್ ದೇವಿನೇನಿ ನಿರ್ಮಾಣ ಮಾಡಿದ್ದರು, ಎಂ ಎಂ ಕೀರವಾಣಿ ಸಂಗೀತಕ್ಕೆ ಪ್ರೇಕ್ಷಕರು ಫಿದಾ ಆಗಿದ್ದರು. ರಾಜಮೌಳಿ ಕುಟುಂಬದ ಬಹುತೇಕ ಮಂದಿ ಈ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ.
‘ಬಾಹುಬಲಿ ‘ ಚಿತ್ರದ ಮೂಲಕ ದಕ್ಷಿಣ ಭಾರತದ ಸ್ಟಾರ್ ನಟನಾಗಿದ್ದ ಪ್ರಭಾಸ್ ಗೆ ಭಾರತದಲ್ಲೆಡೇ ಅಭಿಮಾನಿಗಳು ಹುಟ್ಟಿಕೊಂಡರು. ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ, ಅನುಷ್ಕಾ ಶೆಟ್ಟಿ, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಸತ್ಯರಾಜ್ ಸೇರಿದಂತೆ ಮೊದಲಾದ ಕಲಾವಿದರು ತೆರೆ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಇಂದು ‘ಬಾಹುಬಲಿ’ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ದೇಶದೆಲ್ಲೆಡೆ ಸಂಭ್ರಮಿಸಿದ್ದಾರೆ