ಸೌತ್ ಸ್ಟಾರ್ ನಯನತಾರಾ ಬಹುಕಾಲದ ಗೆಳೆಯ ವಿಘ್ನೇಶ್ ಶಿವನ್ ಅವರನ್ನು ಮದುವೆಯಾಗಿ ಒಂದು ತಿಂಗಳಾಗಿದೆ. ಈ ಸಂದರ್ಭದಲ್ಲಿ ಅಭಿಮಾನಿಗಳೆದುರು ತಮ್ಮ ಖುಷಿಯ ಕ್ಷಣಗಳನ್ನು ತೆರೆದಿಟ್ಟಿದ್ದಾರೆ.
ಜೂನ್ 9 ರಂದು ಚೆನ್ನೈ ಬಳಿಯ ಮಹಾಬಲಿಪುರಂನಲ್ಲಿರುವ ಪಾರ್ಕ್ ಶೆರಾಟನ್ನಲ್ಲಿ ನಡೆದ ಸಮಾರಂಭದಲ್ಲಿ ಇಬ್ಬರೂ ವಿವಾಹವಾದರು.
ವಿವಾಹದಲ್ಲಿ ರಜನಿಕಾಂತ್, ಮಣಿರತ್ನಂ ಮತ್ತು ಶಾರುಖ್ ಖಾನ್ ಸೇರಿದಂತೆ ದಕ್ಷಿಣ ಚಿತ್ರರಂಗ ಮತ್ತು ಬಾಲಿವುಡ್ನ ಅನೇಕ ದೊಡ್ಡ ತಾರೆಯರು ಭಾಗವಹಿಸಿದ್ದರು.
ಈಗ ಮದುವೆಯ ಒಂದು ತಿಂಗಳ ನಂತರ, ವಿಘ್ನೇಶ್ ಶಿವನ್ ತಮ್ಮಪಾಲಿಗೆ ಮುಖ್ಯವೆನಿಸಿದ ಫೋಟೋವನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.
ವಿಘ್ನೇಶ್ ಶಿವನ್ ಟ್ವಿಟರ್ನಲ್ಲಿ ರಜನಿಕಾಂತ್, ಶಾರುಖ್ ಮತ್ತು ಮಣಿರತ್ನಂ ಅವರೊಂದಿಗೆ ಮದುವೆಯ ಸ್ನ್ಯಾಪ್ಗಳನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ರಜನಿಕಾಂತ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡ ವಿಘ್ನೇಶ್ ಶಿವನ್, “ಪ್ರೀತಿಯ ತಲೈವರ್ ರಜನಿಕಾಂತ್ ಸರ್ ಅವರು ನಮ್ಮ ಮದುವೆಯಂದು ಉಪಸ್ಥಿತಿಯೊಂದಿಗೆ ಆಶೀರ್ವದಿಸಿದ್ದಾರೆ. ನಮ್ಮ ವಿಶೇಷತೆಯ ಒಂದು ತಿಂಗಳ ಸಂದರ್ಭದಲ್ಲಿ ಕೆಲವು ಉತ್ತಮ ಕ್ಷಣಗಳನ್ನು ಹಂಚಿಕೊಳ್ಳಲು ಸಂತೋಷವಾಗಿದೆ ಎಂಬ ಸಾಲುಗಳನ್ನೂ ಸಹ ಬರೆದುಕೊಂಡಿದ್ದಾರೆ.
ವಿಘ್ನೇಶ್, ಶಾರುಖ್ ಖಾನ್ ಜೊತೆಗಿನ ಚಿತ್ರಗಳನ್ನು ಸಹ ಹಂಚಿಕೊಂಡಿದ್ದಾರೆ. ಶಾರುಖ್ ನಮ್ಮ ಮದುವೆಯಲ್ಲಿ ಹಾಜರಿದ್ದು ಆಶೀರ್ವದಿಸಿದರು ಎಂದು ಭಾವುಕರಾಗಿ ಶೀರ್ಷಿಕೆ ಬರೆದಿದ್ದಾರೆ.