ದಿನಗೂಲಿ ನೌಕರನ ಪ್ರತಿಭಾವಂತ ಪುತ್ರನೊಬ್ಬ ಅಮೆರಿಕಾದಲ್ಲಿ ವ್ಯಾಸಂಗ ಮಾಡಲು ಬರೋಬ್ಬರಿ 2.5 ಕೋಟಿ ರೂಪಾಯಿ ಸ್ಕಾಲರ್ಶಿಪ್ ಪಡೆದಿದ್ದಾರೆ. ಬಿಹಾರದ ಪಾಟ್ನಾ ಜಿಲ್ಲೆಯ ಕುಗ್ರಾಮವೊಂದರ ವಿದ್ಯಾರ್ಥಿ ಇಂತಹ ಮಹಾನ್ ಸಾಧನೆ ಮಾಡಿದ್ದಾರೆ.
ಪ್ರೇಮ್ ಕುಮಾರ್ ಎಂಬ ಈ ವಿದ್ಯಾರ್ಥಿ ಸ್ವಯಂಸೇವಾ ಸಂಸ್ಥೆಯೊಂದು ನಡೆಸುವ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ್ದು, ಅಲ್ಲಿನ ಶಿಕ್ಷಕರ ಸಹಕಾರದಿಂದ ಉನ್ನತ ಸಾಧನೆ ಮಾಡಿದ್ದಾರೆ. ದಲಿತ ಸಮುದಾಯದಿಂದ ಬಂದಿರುವ ಪ್ರೇಮ್ ಕುಮಾರ್ ತನ್ನ ಪ್ರತಿಭೆಯಿಂದ ಈಗ ಎಲ್ಲರ ಮನೆ ಮಾತಾಗಿದ್ದಾನೆ.
ಪ್ರೇಮ್ ಕುಮಾರ್ ತಂದೆ ಒಬ್ಬ ದಿನಗೂಲಿ ನೌಕರನಾಗಿದ್ದು, ತಾಯಿ ಮನೆ ಕೆಲಸ ಮಾಡುತ್ತಾರೆ. ತಮ್ಮ ಕಡುಬಡತನದ ನಡುವೆಯೂ ಪುತ್ರನ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದು, ಮಗನ ಯಶಸ್ಸನ್ನು ಕಂಡು ಈಗ ಆನಂದಿಸುತ್ತಿದ್ದಾರೆ.
ಪ್ರೇಮ್ ಕುಮಾರ್ ಈಗ ತನ್ನ ಗ್ರಾಮ ಜಿಲ್ಲೆ, ರಾಜ್ಯ ಮಾತ್ರವಲ್ಲ ಇಡೀ ದೇಶಕ್ಕೆ ಕೀರ್ತಿ ತಂದಿದ್ದು, ಈ ಸ್ಕಾಲರ್ ಶಿಪ್ ಗೆ ಆಯ್ಕೆಯಾದ ವಿಶ್ವದ 6 ಮಂದಿ ಪೈಕಿ ಈತ ಕೂಡ ಒಬ್ಬರಾಗಿದ್ದಾರೆ. ತನ್ನ ಮುಂದಿನ ವ್ಯಾಸಂಗಕ್ಕಾಗಿ ಪ್ರೇಮ್ ಕುಮಾರ್ ಅಮೆರಿಕಾಗೆ ತೆರಳಲಿದ್ದಾರೆ.