ಪಾಕ್ ಸಚಿವನನ್ನು ಬಹಿರಂಗವಾಗಿಯೇ ʼಚೋರ್ ಚೋರ್ʼ ಎಂದು ಛೇಡಿಸಿದ ಕುಟುಂಬ 10-07-2022 11:43AM IST / No Comments / Posted In: Latest News, Live News, International ಪಾಕಿಸ್ತಾನ ಸಚಿವನನ್ನು ಕುಟುಂಬವೊಂದು ಚೋರ್ ಚೋರ್ ಎಂದು ಸಾರ್ವಜನಿಕ ಸ್ಥಳದಲ್ಲಿ ಛೇಡಿಸಿದ ವಿಡಿಯೋ ವೈರಲ್ ಆಗಿದೆ. ಇಸ್ಲಾಮಾಬಾದ್- ಲಾಹೋರ್ ರಸ್ತೆ ಮಾರ್ಗದಲ್ಲಿ ಬರುವ ಭೇರಾದಲ್ಲಿನ ಈಟರಿಯಲ್ಲಿ ಈ ಘಟನೆ ನಡೆದಿದೆ. ಪಾಕಿಸ್ತಾನದ ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ರೆಸ್ಟೊರೆಂಟ್ನಲ್ಲಿ ಆರ್ಡರ್ ಮಾಡಲು ನಿಂತಿದ್ದ ಸಂದರ್ಭದಲ್ಲಿ ಒಂದು ಗುಂಪು ಸುತ್ತುವರಿದು ಚೋರ್ ಚೋರ್…… ಎಂದು ಸತತವಾಗಿ ಘೋಷಣೆ ಕೂಗುತ್ತದೆ. ಅಲ್ಲಿದ್ದ ಜನರೆಲ್ಲ ಇದನ್ನು ಅವಾಕ್ಕಾಗಿ ನೋಡುತ್ತಾರೆ. ಕೆಲವರಂತೂ ಬಿದ್ದು ಬಿದ್ದು ನಗುವುದೂ ಸಹ ವಿಡಿಯೋದಲ್ಲಿ ಕಾಣಿಸುತ್ತದೆ. ಘೋಷಣೆ ಹಾಕಿದವರು ನಿಧಾನಕ್ಕೆ ಜಾಗ ಖಾಲಿ ಮಾಡುತ್ತಾರೆ. ಈ ನಡುವೆ ಸಚಿವ ಇಕ್ಬಾಲ್ ಏನೆಂದು ಪ್ರಶ್ನಿಸಲು ಪ್ರಯತ್ನಿಸುವುದು ಮತ್ತು ತಮ್ಮ ಕುಟುಂಬಕ್ಕೆ ಏನೋ ಹೇಳುವುದು ಕಾಣಿಸುತ್ತದೆ. ವಿಡಿಯೊದಲ್ಲಿ ಮಕ್ಕಳು ಸೇರಿದಂತೆ ಐವರಿದ್ದ ಕುಟುಂಬವು ಇಕ್ಬಾಲ್ನನ್ನು ಚೋರ್ ಚೋರ್…… ಎಂದು ಹತ್ತಾರು ಬಾರಿ ಕೂಗಿತ್ತು. ಈ ಬೆಳವಣಿಗೆಗೆ ಸಂಬಂಧಿಸಿದಂತೆ ಒಂದಷ್ಟು ಪ್ರತಿಕ್ರಿಯೆ ಬಂದಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯಗಳು ಬಂದಿವೆ. ಇನ್ನು ಆ ಸಚಿವ ಟ್ವೀಟ್ ಮಾಡಿ, ಆ ಕುಟುಂಬ ತಮ್ಮನ್ನು ಗಣ್ಯರೆಂದು ಭಾವಿಸಿಕೊಂಡಿದ್ದರೆ, ಅವರು ಅಣಕಿಸಿದ ರೀತಿ ಸಂಸ್ಕೃತಿ ರಹಿತರು ಎಂದು ತೋರಿಸಿತು ಎಂದು ಹೇಳಿಕೊಂಡಿದ್ದಾರೆ. ಆದರೆ, ಆ ಕುಟುಂಬ ಆ ರೀತಿ ಬಹಿರಂಗವಾಗಿ ನಿಂದಿಸಲು ಕಾರಣ ಏನೆಂದು ಗೊತ್ತಾಗಿಲ್ಲ. After watching federal Minister Ahsan Iqbal at McDonalds, people started chanting 'Chor, Chor'….. These crooks have left no respect from public. #چور_کا_عوامی_احتساب#PunjabKaptaanKa pic.twitter.com/6Ur9cQSyhh — PTI Rawalpindi (@PTIOfficialRWP) July 8, 2022