ಪೋಷಕರು ಸಾಮಾನ್ಯವಾಗಿ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಅವರ ಬೆಳವಣಿಗೆಗೆ ಪೌಷ್ಟಿಕಾಂಶಯುಕ್ತ ಆಹಾರವನ್ನು ನೀಡುತ್ತಾರೆ. ಆದರೆ ಮಕ್ಕಳ ಮುಂದಿನ ಜೀವನದ ಯಶಸ್ಸು, ಏಳಿಗೆ ಬಗ್ಗೆ ಗಮನ ಕೊಡುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳು ಮುಂದೆ ಜೀವನದಲ್ಲಿ ಅಭಿವೃದ್ಧಿಯ ಪತದತ್ತ ಸಾಗಲು ವಾಸ್ತು ಶಾಸ್ತ್ರದ ಪ್ರಕಾರ ಅವರು ಮಲಗುವ ಕೋಣೆಯನ್ನು ಈ ರೀತಿಯಾಗಿ ವಿನ್ಯಾಸಗೊಳಿಸಿ.
* ಮಕ್ಕಳ ಕೋಣೆಯ ಮನೆಯ ಪಶ್ಚಿಮ ದಿಕ್ಕಿನಲ್ಲಿರಬೇಕು. ಮನಸ್ಸಿನ ಶಾಂತಿಗಾಗಿ ಮಕ್ಕಳು ದಕ್ಷಿಣ ಅಥವಾ ಪೂರ್ವ ದಿಕ್ಕಿನ ಕಡೆಗೆ ತಲೆ ಇಟ್ಟು ಮಲಗಬೇಕು.
*ಮಕ್ಕಳ ಕೋಣೆಯಲ್ಲಿ ಹಾಸಿಗೆ ಬಾಗಿಲಿನ ಮುಂದೆ ಇರಬಾರದು. ಪೀಠೋಪಕರಣಗಳನ್ನು ಕೋಣೆಯ ನೈರುತ್ಯ ದಿಕ್ಕಿನಲ್ಲಿಡಬೆಕು.
*ಕಂಪ್ಯೂಟರ್ ಉತ್ತರ ದಿಕ್ಕಿಗೆ ಮತ್ತು ಟಿವಿ ಆಗ್ನೀಯ ದಿಕ್ಕಿನಲ್ಲಿಡಬೇಕು.
*ಮಕ್ಕಳ ಕೋಣೆಯಲ್ಲಿ ಹಾಸಿಗೆಯ ಮುಂದೆ ಯಾವುದೇ ಕನ್ನಡಿ ಇರಿಸಬಾರದು.
*ಮಕ್ಕಳು ಅಧ್ಯಯನ ಮಾಡುವ ಟೇಬಲ್ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೆಕು.
*ಮಕ್ಕಳ ಕೋಣೆ ಹಸಿರು ಅಥವಾ ನೀಲಿ ಬಣ್ಣವಿರಬೇಕು. ಕೋಣೆಯ ಕಿಟಕಿಗಳು ಪೂರ್ವ ಅಥವಾ ಉತ್ತರದ ಕಡೆ ಇರಬೇಕು. ಈಶಾನ್ಯ ಮೂಲೆಯಲ್ಲಿ ನೀರಿನಿಂದ ತಯಾರಿಸಿದ ಅಲಂಕಾರಿಕ ವಸ್ತುವನ್ನು ಇಡಿ.