alex Certify ಭಾವುಕರನ್ನಾಗಿಸುತ್ತೆ ತಾಯಿ ಹೃದಯದ ಮಮತೆಯ ಈ ಸ್ಟೋರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾವುಕರನ್ನಾಗಿಸುತ್ತೆ ತಾಯಿ ಹೃದಯದ ಮಮತೆಯ ಈ ಸ್ಟೋರಿ

ತಾಯಿ ಪ್ರೀತಿಗೆ ಮಿಗಿಲಾದುದು ಬೇರೆ ಯಾವುದೂ ಇಲ್ಲ. ಮಹಿಳೆಯೊಬ್ಬರು ಟ್ವಿಟ್ಟರ್‌ನಲ್ಲಿ ತಮ್ಮ ಸುಂದರವಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಇದು ಆನ್‌ಲೈನ್‌ನಲ್ಲಿ ಹಲವಾರು ಜನರ ಹೃದಯಗಳನ್ನು ಕರಗಿಸಿದೆ. ಇದನ್ನು ಓದಿದ್ರೆ ನಿಮ್ಮ ಕಣ್ಣಲ್ಲೂ ಸಂತಸದ ನೀರು ತರಿಸಬಹುದು.

ಟ್ವಿಟ್ಟರ್‌ನಲ್ಲಿ ಶ್ರುಬೆರಿ ಎಂಬ ಬಳಕೆದಾರರು ಇದನ್ನು ಹಂಚಿಕೊಂಡಿದ್ದಾರೆ. ಹಾಸ್ಟೆಲ್ ನಲ್ಲಿನ ಊಟ ತನಗೆ ಸೇರುತ್ತಿಲ್ಲ ಎಂದು ಶ್ರುಬೆರಿ ತನ್ನ ಸ್ನೇಹಿತನಿಗೆ ದೂರು ನೀಡಿದ್ದಾಳೆ. ಅವಳ ಸ್ನೇಹಿತ ತನ್ನ ತಾಯಿಗೆ ಗೆಳತಿ ಅನುಭವಿಸುತ್ತಿರುವ ತೊಂದರೆ ಬಗ್ಗೆ ವಿವರಿಸಿದ್ದಾನೆ. ಈ ವೇಳೆ ಅವರು ಅತ್ಯಂತ ಹೃದಯಸ್ಪರ್ಶಿಯಾದ ಕೆಲಸವನ್ನು ಮಾಡಿದ್ದಾರೆ.

ಹೌದು, ಸ್ನೇಹಿತನ ತಾಯಿ ಪ್ರತಿದಿನ ಅವಳಿಗೆ ಆಹಾರವನ್ನು ಕಳುಹಿಸಲು ಪ್ರಾರಂಭಿಸಿದ್ರು. ಪ್ರತಿಯಾಗಿ ನೀಡಲು ಏನೂ ಇಲ್ಲದಿರುವುದರಿಂದ ಇನ್ನು ಮುಂದೆ ಟಿಫಿನ್‌ಗಳನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾಳೆ. ಅದನ್ನು ಕೇಳಿದ ಸ್ನೇಹಿತನ ತಾಯಿ ಊಟದ ಡಬ್ಬಿಗಳೊಂದಿಗೆ ಪುಟ್ಟ ನೋಟುಗಳನ್ನು ಕಳುಹಿಸತೊಡಗಿದಳು. ಆಹಾರವನ್ನು ಆನಂದಿಸು. ಮಕ್ಕಳು ತಮ್ಮ ತಾಯಿಗೆ ಖಾಲಿ ಟಿಫಿನ್ ಕಳುಹಿಸುವ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಟಿಫಿನ್‌ನೊಂದಿಗೆ ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ನೀವು ಕಳುಹಿಸಬಹುದು ಎಂದು ಪತ್ರದಲ್ಲಿ ಬರೆಯಲಾಗಿತ್ತು.

ಪೋಸ್ಟ್ ನಿಸ್ಸಂಶಯವಾಗಿ ಆನ್‌ಲೈನ್‌ನಲ್ಲಿ ಸಾಕಷ್ಟು ಗಮನ ಸೆಳೆದಿದೆ. ನೆಟ್ಟಿಗರು ಸ್ನೇಹಿತನ ತಾಯಿಯ ಪ್ರೀತಿಗೆ ನಂಬಲಾಗದಷ್ಟು ಭಾವುಕರಾಗಿದ್ದಾರೆ. ಕಾಮೆಂಟ್‌ ವಿಭಾಗದಲ್ಲಿ ತಮ್ಮ ಪ್ರೀತಿಯ ಸುರಿಮಳೆಯನ್ನೇ ಹರಿಸಿದ್ದಾರೆ. ಕೆಲವರು ತಮಗೆ ಗೊತ್ತಿಲ್ಲದಂತೆ ಕಣ್ಣೀರು ಹಾಕಿದ್ದಾರೆ.

https://twitter.com/psychedamygdala/status/1544939380615380992?ref_src=twsrc%5Etfw%7Ctwcamp%5Etweetembed%7Ctwterm%5E1544939380615380992%7Ctwgr%5E%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-woman-didn-t-like-hostel-mess-food-and-told-her-friend-about-it-and-then-1973591-2022-07-09

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...