ಮಹಿಳೆಯೊಬ್ಬರು ತನ್ನ ಲಿಂಕ್ಡ್ ಇನ್ ಪ್ರೊಫೈಲ್ಗೆ ‘ಸೆಕ್ಸ್ ವರ್ಕ್’ ಸೇರಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಎಗೋಝಿ ಎಂಬಾಕೆಯು ಲೈಂಗಿಕ ಕೆಲಸದಲ್ಲಿ ಸ್ವಯಂ ಉದ್ಯೋಗವನ್ನು ಒಳಗೊಂಡಿರುವುದಾಗಿ ತನ್ನ ಪ್ರೊಫೈಲ್ ನಲ್ಲಿ ಬರೆದಿದ್ದಾರೆ. ಅಷ್ಟೇ ಅಲ್ಲ ತಾನು ಎಷ್ಟು ವರ್ಷದಿಂದ ಕೆಲಸ ಮಾಡುತ್ತಿದ್ದೇನೆ ಎಂಬುದನ್ನೂ ಕೂಡ ಉಲ್ಲೇಖಿಸಿದ್ದಾರೆ.
ಎಗೋಝಿಯ ಲಿಂಕ್ಡ್ಇನ್ ಪ್ರೊಫೈಲ್ ನೆಟ್ಟಿಗರ ಮೆಚ್ಚುಗೆಯನ್ನು ಪಡೆದಿದೆ. ಎಗೋಝಿ ತನ್ನ ಲಿಂಕ್ಡ್ಇನ್ ಪ್ರೊಫೈಲ್ನಲ್ಲಿ ‘ಸೆಕ್ಸ್ ವರ್ಕ್’ ಅನ್ನು ಉಲ್ಲೇಖಿಸಲು ಕಾರಣವೇನು ಎಂಬುದನ್ನು ವಿವರಿಸಿದ್ದಾರೆ. ಆಕೆ ಸೆಕ್ಸ್ ಅನ್ನು ತನ್ನ ಕೆಲಸ ಎಂಬುದಾಗಿ ವಿವರಿಸಿದ್ದಾರೆ. ತಾನು ಯಾಕಾಗಿ ಮಾಡಿಗೆ, ಈಗ ಅದರಿಂದ ಹೊರಬರಲು ಕಾರಣವೇನು ಎಂಬುದನ್ನು ಆಕೆ ತಿಳಿಸಿದ್ದಾರೆ.
ತನ್ನ ಸುದೀರ್ಘ ಪೋಸ್ಟ್ನಲ್ಲಿ, ಎಗೋಝಿ ಲೈಂಗಿಕ ಕೆಲಸದಿಂದ ಉಂಟಾಗುವ ಭಾವನಾತ್ಮಕ ಶ್ರಮದ ಬಗ್ಗೆಯೂ ಮಾತನಾಡಿದ್ದಾರೆ. ತಾನು ಶುಲ್ಕದಲ್ಲಿಯೇ ಭಾವನಾತ್ಮಕ ಶ್ರಮವನ್ನು ವಿಧಿಸುವುದಾಗಿ ಹೇಳಿಕೊಂಡಿದ್ದಾರೆ. ಇದರಿಂದ ತಾನು ಲವಲವಿಕೆಯಿಂದಲೇ ಇದ್ದುದಾಗಿ ಹೇಳಿದ್ದಾರೆ.
ಎಗೋಝಿಯ ಈ ಮಾತುಗಳನ್ನು ಕೇಳಿ ನೆಟ್ಟಿಗರು ಈಕೆಯನ್ನು ಹಾಡಿ ಹೊಗಳಿದ್ದಾರೆ. ಎಗೋಜಿ ಹಂಚಿಕೊಂಡಿರುವ ಪೋಸ್ಟ್ ನೆಟ್ಟಿಗರಿಂದ ಪ್ರಶಂಸೆಗೆ ಪಾತ್ರವಾಗಿದೆ. ನಾವು ಗರ್ಭಪಾತದ ಸಂದರ್ಭದಲ್ಲಿ ಮಹಿಳೆಯರ ಹಕ್ಕುಗಳ ಬಗ್ಗೆ ಮಾತನಾಡುತ್ತೇವೆ. ಆದರೆ ಆದಾಯವನ್ನು ಗಳಿಸಲು ಮಹಿಳೆ ತನ್ನ ದೇಹವನ್ನು ಬಳಸುವ ಹಕ್ಕಿನ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.