ಪ್ರತಿಯೊಬ್ಬರಿಗೂ ತಮ್ಮದೇ ಆಯ್ಕೆ, ಆಸೆಗಳಿರುತ್ತವೆ. ಹುಡುಗಿಯರಿಗೆ ಎಂಥ ಹುಡುಗ ಇಷ್ಟ ಎಂಬುದನ್ನು ತಕ್ಷಣ ಹೇಳೋದು ಕಷ್ಟ. ಒಂದೊಂದು ಹುಡುಗಿ ಇಷ್ಟ, ಕಷ್ಟಗಳು ಒಂದೊಂದು ರೀತಿಯಲ್ಲಿರುತ್ತವೆ. ಹಾಗಿದ್ದೂ ಬಹುತೇಕ ಹುಡುಗಿಯರ ಆಯ್ಕೆ ಒಂದೇ ಆಗಿರುತ್ತದೆ. ಹುಡುಗಿಯರು ಎಲ್ಲರನ್ನೂ ಗೌರವಿಸುವ, ಪ್ರೀತಿಸುವ, ಸೌಮ್ಯ ಸ್ವಭಾವದ, ತೆಳ್ಳಗೆ ಬೆಳ್ಳಗಿರುವ ಹುಡುಗನಿಗೆ ಆಕರ್ಷಿತರಾಗ್ತಾರೆ ಎಂಬುದು ಸುಳ್ಳಲ್ಲ.
ಜೆಂಟಲ್ಮೆನ್ ಹುಡುಗನಿಗೆ ಸಾಮಾನ್ಯವಾಗಿ ಬಹುತೇಕ ಹುಡುಗಿಯರು ಆಕರ್ಷಿತರಾಗ್ತಾರೆ. ಸರಳ, ನೇರ ಸ್ವಭಾವದವನಾಗಿದ್ದು, ಅವಶ್ಯಕತೆ ಬಂದಾಗ ಸಿಡಿದೇಳುವ ಹುಡುಗನನ್ನು ಹುಡುಗಿಯರು ಇಷ್ಟಪಡ್ತಾರೆ. ಚಿಂತನಶೀಲ ಮತ್ತು ಸಂವೇದನಾಶೀಲ ಹುಡುಗನನ್ನು ಅವ್ರು ಹೆಚ್ಚು ಇಷ್ಟಪಡ್ತಾರೆ.
ಹುಡುಗಿಯರನ್ನು ಹೆಚ್ಚಾಗಿ ನೋಡದ, ತನ್ನ ಪಾಡಿಗೆ ತಾನಿರುವ ಹುಡುಗ್ರಿಗೆ ಹುಡುಗಿಯರು ಆಕರ್ಷಿತರಾಗ್ತಾರೆ. ಹುಡುಗಿಯನ್ನು ನೋಡಿ ಚೆಲ್ಲು ಚೆಲ್ಲಾಗಿ ಆಡುವ, ಸ್ಟೈಲ್ ಮಾಡುವ, ಅತಿಯಾಗಿ ಮಾತನಾಡುವ ಹುಡುಗನಿಗಿಂತ ತನ್ನದೆ ಆಲೋಚನೆಯಲ್ಲಿರುವ, ಹುಡುಗಿಯರನ್ನು ನಿರ್ಲಕ್ಷ್ಯಿಸುವ ಹುಡುಗನಿಗೆ ಹುಡುಗಿಯರು ಹೆಚ್ಚು ಆಕರ್ಷಿತರಾಗ್ತಾರೆ.
ನಾಚಿಕೊಳ್ಳುವ, ಸಂಶಯದ ಹುಡುಗ ಹುಡುಗಿಗೆ ಇಷ್ಟವಾಗುವುದಿಲ್ಲ. ದಬಂಗ್ ಸ್ವಭಾವದ, ಆತ್ಮವಿಶ್ವಾಸವುಳ್ಳ ಹುಡುಗನಿಗೆ ಹುಡುಗಿಯರು ಬೇಗ ಮನ ಸೋಲುತ್ತಾರೆ.
ಕಾಳಜಿಯುಳ್ಳ ಹುಡುಗ್ರು ಹುಡುಗಿಯರಿಗೆ ಇಷ್ಟವಾಗ್ತಾರೆ. ಈತ ನನ್ನನ್ನು ಜೀವನ ಪೂರ್ತಿ ಪ್ರೀತಿಯಿಂದ, ಕಾಳಜಿಯಿಂದ ನೋಡಿಕೊಳ್ಳಬಲ್ಲ ಎಂಬ ನಂಬಿಕೆ ಅವ್ರಲ್ಲಿ ಮೂಡುತ್ತದೆ.
ಬಹುಮುಖ್ಯವಾಗಿ ಹುಡುಗಿಯರಿಗೆ ಹುಡುಗ್ರು ಗೌರವ ನೀಡಬೇಕು. ಪ್ರೀತಿಸಿದ ಹುಡುಗಿಗೊಂದೇ ಅಲ್ಲ ಎಲ್ಲ ಮಹಿಳೆಯರಿಗೆ ಗೌರವ ನೀಡಬೇಕು. ಅವ್ರ ಸ್ಥಾನಕ್ಕೆ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಅವಶ್ಯಕತೆ ಬಿದ್ದಾಗ ನೆರವಿಗೆ ಬರಬೇಕು. ಅಂತ ಹುಡುಗ್ರನ್ನು ಹುಡುಗಿಯರು ಹೆಚ್ಚು ಇಷ್ಟಪಡ್ತಾರೆ.