ಬ್ರಿಟನ್ನ ಕೋಟ್ಯಾಧಿಪತಿ 10 ವರ್ಷಗಳ ಹಿಂದೆ ನೀಡಿದ್ದ ಸರಿ ಸುಮಾರು 1.9 ಕೋಟಿ ರೂಪಾಯಿ ಸಾಲವನ್ನು ಹಿಂದಿರುಗಿಸದ ಬೀದಿಯಲ್ಲಿ ಕಸ ಗುಡಿಸುವ ತನ್ನ ಸ್ನೇಹಿತನ ವಿರುದ್ಧದ ಕಾನೂನು ಹೋರಾಟದಲ್ಲಿ ಗೆಲುವು ಸಾಧಿಸಿದ್ದಾರೆ.
ಸೈಮನ್ ಡೇನಿಯರ್ ಗಿಲ್ಡ್ಫೋರ್ಡ್ ಬರೋ ಕೌನ್ಸಿಲ್ನಲ್ಲಿ ಸ್ಟ್ರೀಟ್ ಕ್ಲೀನರ್ ಆಗಿ ಕೆಲಸ ಮಾಡುತ್ತಾರೆ. ಇವರು 2012 ಹಾಗೂ 14ರಲ್ಲಿ ತನ್ನ ಕೋಟ್ಯಾಧಿಪತಿ ಸ್ನೇಹಿತ ಜಾನ್ ರಾಂಕಿನ್ನಿಂದ 1.9 ಕೋಟಿ ರೂಪಾಯಿ ಸಾಲ ಪಡೆದಿದ್ದರು.
ಕಾರ್ನ್‌ಫೋರ್ತ್ ಮತ್ತು ಡೆನಿಯರ್ 1979 ರಲ್ಲಿ ಹೊಸ ವರ್ಷದ ಪಾರ್ಟಿಯಲ್ಲಿ ಭೇಟಿಯಾದರು. ಅಂದಿನಿಂದ, ಅವರು ಎಣ್ಣೆ ಪಾರ್ಟಿ ಮಾಡುತ್ತಾ ಗೆಳೆಯರಾಗಿದ್ದರು. ಸಮಯ ಕಳೆದಂತೆ ಕಾರ್ನ್ಪೋರ್ತ್ ಶ್ರೀಮಂತರಾದರು ಹಾಗೂ ಡೆನಿಯರ್ ಬಡವರಾದರು.
ಜಾನ್ ರಾಂಕಿನ್ ತಂದೆ ನಿಧನರಾದ ಬಳಿಕ ಅವರ ಕೋಟಿ ಆಸ್ತಿಗಳಿಗೆ ಇವರೇ ಮಾಲೀಕರಾದರು. ಡೇನಿಯರ್ಗೆ ವಿಚ್ಚೇದನವೂ ಸೇರಿದಂತೆ ಜೀವನದಲ್ಲಿ ಸೋಲುಗಳೇ ಹೆಚ್ಚಾಗಿತ್ತು. ವಿಚ್ಛೇದನಕ್ಕೆ ಖರ್ಚು 25 ಲಕ್ಷ ರೂಪಾಯಿ ಸೇರಿದಂತೆ ಕೋಟಿಗೂ ಅಧಿಕ ಮೊತ್ತದ ಹಣವನ್ನು ಜಾನ್ ರಾಂಕಿನ್ ಸಾಲದ ರೂಪದಲ್ಲಿ ಡೇನಿಯರ್ಗೆ ನೀಡಿದ್ದರು.
ಆದರೆ ಇದು ವಿಶ್ವಾಸದ ಮೇಲೆ ನಡೆದ ವ್ಯವಹಾರವಾಗಿತ್ತು. ಇದಕ್ಕೆ ಯಾವುದೇ ದಾಖಲೆಗಳು ಇರಲಿಲ್ಲ. ಆದರೆ ಸ್ನೇಹಿತ ಹಣ ತೀರಿಸದೇ ಇದ್ದುದನ್ನು ಗಮನಿಸಿದ ರಾಂಕಿನ್ ಕಾನೂನು ಹೋರಾಟಕ್ಕೆ ಮುಂದಾದರು. ಇದೀಗ ಕೋರ್ಟ್ ಆದೇಶ ನೀಡಿದ್ದು 10 ವರ್ಷಗಳ ಬಡ್ಡಿ ಸಮೇತ ಹಣ ವಾಪಸ್ ನೀಡುವಂತೆ ಆದೇಶ ಹೊರಡಿಸಿದೆ.