alex Certify ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಲು ಕಳೆದುಕೊಂಡಿದ್ದ ಅಪರೂಪದ ತಳಿಯ ಆಮೆಗೆ ಹೊಸ ಜೀವನ

ಅತ್ಯಂತ ಅಪರೂಪದ ಆಮೆಯನ್ನು ಹಾಂಗ್​ಕಾಂಗ್​ನಲ್ಲಿ ಕಳ್ಳಸಾಗಣೆ ಮಾಡುತ್ತಿದ್ದಾಗ ಕಸ್ಟಮ್ಸ್​ ಅಧಿಕಾರಿಗಳು ರಕ್ಷಿಸಿದ್ದಾರೆ. ಇದನ್ನು ಹೋಪ್​ ಎಂದು ಕರೆಯಲಾಗಿದ್ದು, ಹೊಸ ಜೀವನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇದಕ್ಕೆ ಹೋಪ್​ ಎಂದು ಕರೆಯಲು ಕಾರಣವೂ ಇದೆ.

ಹೋಪ್​ ಅಪರೂಪದ ಮತ್ತು ಅಳಿವಿನಂಚಿನಲ್ಲಿರುವ ಆಮೆಗಳ ವರ್ಗಕ್ಕೆ ಸೇರಿದ್ದು, ಆ ಸಂತತಿ ಕೇವಲ 300ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಕಾಡಿನಲ್ಲಿ ಉಳಿದಿವೆ. 2019 ರಲ್ಲಿ ಪೂರ್ವ ಆಫ್ರಿಕಾದ ಕೊಮೊರೊ ದ್ವೀಪಗಳಿಂದ ಕಳ್ಳಸಾಗಣೆ ಮಾಡುತ್ತಿದ್ದ ಅಕ್ರಮ ವನ್ಯಜೀವಿ ವ್ಯಾಪಾರಿಯಿಂದ ಅದನ್ನು ರಕ್ಷಿಸಲಾಗಿತ್ತು.

57 ಜೀವಂತ ಮತ್ತು ಅಳಿವಿನಂಚಿನಲ್ಲಿರುವ ಆಮೆಗಳೊಂದಿಗೆ ಸೂಟ್​ಕೇಸ್​ ಅನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ಹಾಂಗ್​ ಕಾಂಗ್​ನಲ್ಲಿ ಕಸ್ಟಮ್​ ಅಧಿಕಾರಿಗಳು ತಡೆದಿದ್ದರು. ಅದರಲ್ಲಿ ಮೂರು ಕಾಲಿನ ಒಂದು ಆಮೆ ಕಾಣಿಸಿತ್ತು. ಬಳಿಕ ಅದನ್ನು ಹಾಂಗ್​ ಕಾಂಗ್​ನ ರಕ್ಷಣಾ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಹೋಪ್​ ಎಂದು ನಾಮಕರಣ ಮಾಡಲಾಗಿತ್ತು.

ತಜ್ಞರು ಅದನ್ನು ಸಮತೋಲನಗೊಳಿಸಲು ಕೆಳಗಿನ ಶೆಲ್​ ಅಡಿಯಲ್ಲಿ ರೋಲರ್​ಗಳ ಸೆಟ್​ ಬಳಸಿ ಸಜ್ಜುಗೊಳಿಸಿದರು. ಈಗ, ಹೋಪ್​ ಯುಕೆಯಲ್ಲಿನ ಚೆಸ್ಟರ್​ ಮೃಗಾಲಯದಲ್ಲಿದೆ. ಅಲ್ಲಿ ರೋಲರ್​ಗಳನ್ನು ಮತ್ತಷ್ಟು ಮಾರ್ಪಡಿಸಿ ಆಮೆಗೆ ಮುಕ್ತವಾಗಿ ಚಲಿಸಲು ಅನುವು ಮಾಡಿಕೊಡಲಾಗಿದೆ.

ಅಲ್ಲಿನ ಕ್ಯುರೇಟರ್​ ಇದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಹೋಪ್​ ತನ್ನ ಹೊಸ ಮನೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮೃಗಾಲಯದಲ್ಲಿ ತನ್ನ ನೆರೆಹೊರೆಯವರಿಗಿಂತ ವೇಗವಾಗಿ ಚಲಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.

ಹೋಪ್​ ಈಗ ಯುರೋಪಿಯನ್​ ಸಂರಕ್ಷಣಾ-ಸಂತಾನೋತ್ಪತ್ತಿ ಯೋಜನೆಗೆ ಸೇರುವ ಸಾಧ್ಯತೆಯಿದೆ, ಅಲ್ಲಿ ಅದು ಅಳಿವಿನಂಚಿನಲ್ಲಿರುವ ತನ್ನ ಜಾತಿಯ ಆಮೆಗಳನ್ನು ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಆಮೆಗಳಿಗೆ ಅಂತರರಾಷ್ಟ್ರೀಯ ಬ್ಲಾಕ್​ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯಿದೆ ಮತ್ತು ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...