ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಹಲ್ಯಾಳ ಏತ ನೀರಾವರಿ ಕಾಲುವೆಗೆ ಬಿದ್ದು, ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ಬಳಿ ನಡೆದಿದೆ.
ಸುರೇಶ್ ತುಕಾರಾಮ ಪೂಜಾರಿ (28) ಹಾಗೂ ಮಹಾದೇವ ಶ್ರೀಶೈಲ ಚಿಗರಿ (24) ಮೃತರು. ಕಾರಿನಲ್ಲಿದ್ದ ಶ್ರೀಕಾಂತ ನಡುವಿನಮನಿ ಎಂಬುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ನೀರಾವರಿ ಕಾಲುವೆಗೆ ಬಿದ್ದಿದೆ. ಅಥಣಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಸಧ್ಯ ಕಾರನ್ನು ಕಾಲುವೆಯಿಂದ ಹೊರತೆಗೆಯಲಾಗಿದೆ.